ಕ್ರಿಕೆಟ್ ಆಟಗಾರರಿಗೆ ಪಾನೀಯ ಹಂಚಿದ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮೊರಿಸನ್

Update: 2019-10-24 18:08 GMT

ಕ್ಯಾನ್‌ಬೆರ್ರಾ, ಅ.24: ಕ್ರಿಕೆಟ್ ಮೈದಾನದಲ್ಲಿ ಕಂಡ ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಆಸ್ಟ್ರೇಲಿಯದ ಪ್ರಧಾನಮಂತ್ರಿ ಸ್ಕಾಟ್ ಮೊರಿಸನ್ ಕ್ರಿಕೆಟ್ ಆಟಗಾರರಿಗೆ ತಂಪುಪಾನೀಯ ಸರಬರಾಜು ಮಾಡುವ ‘ವಾಟರ್ ಬಾಯ್’ ಆಗಿ ಕಾಣಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದರು.

ಗುರುವಾರ ಮನುಕಾ ಓವಲ್‌ನಲ್ಲಿ ಪ್ರಧಾನಮಂತ್ರಿ ಇಲೆವೆನ್ ಹಾಗೂ ಶ್ರೀಲಂಕಾ ತಂಡದ ಮಧ್ಯೆ ನಡೆದ ಅಭ್ಯಾಸ ಪಂದ್ಯದ ವೇಳೆ ಈ ಅಪರೂಪದ ದೃಶ್ಯ ಕಂಡುಬಂತು.

ಪ್ರಧಾನಮಂತ್ರಿ ಇಲೆವೆನ್ ತಂಡದ ಆಟಗಾರರಿಗೆ ತಂಪುಪಾನೀಯವನ್ನು ಸರಬರಾಜು ಮಾಡಲು ಮೈದಾನಕ್ಕೆ ಇಳಿದ ಮೊರಿಸನ್ ಇಡೀ ವಿಶ್ವವನ್ನು ಅಚ್ಚರಿಗೊಳಿಸಿದರು.

ಮೊರಿಸನ್ ತನ್ನ ವಿನಮ್ರತೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಂದ ಶ್ಲಾಘಿಸಲ್ಪಟ್ಟರು. ಕನಿಷ್ಠ ಮೊತ್ತದ ಟ್ವೆಂಟಿ-20 ಪಂದ್ಯವನ್ನು ಪ್ರಧಾನಮಂತ್ರಿ ಇಲೆವೆನ್ ತಂಡ ಶ್ರೀಲಂಕನ್ನರ ವಿರುದ್ಧ 1 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಹ್ಯಾರಿ ನೀಲ್ಸನ್ ಅರ್ಧಶತಕ(50 ಎಸೆತ, 79 ರನ್)ಗಳಿಸಿ ತಂಡದ ಗೆಲುವು ಖಾತ್ರಿಪಡಿಸಿದರು. 9 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಪ್ರಧಾನಮಂತ್ರಿ ಇಲೆವೆನ್ ತಂಡಕ್ಕೆ ಒಂದು ಎಸೆತ ಬಾಕಿ ಇರುವಾಗಲೇ ಫವಾದ್ ಅಹ್ಮದ್ ಗೆಲುವು ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News