ನೊಂದ ಮಕ್ಕಳ ಬದುಕಿನಲ್ಲಿ ಸಂಭ್ರಮದ ಸಂತೃಪ್ತಿಯೇ ನಿಜವಾದ ಜೀವನ: ಜ್ಯೋತಿಷಿ ವಿಶ್ವನಾಥ ಭಟ್

Update: 2019-10-25 11:02 GMT

ಮುಲ್ಕಿ: ಬೆಂಗಳೂರಿನ ಅಂತರ್ ರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಇಂದು ಬೆಳಗ್ಗೆ ಮುಲ್ಕಿ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಬಳಿಕ ಮುಲ್ಕಿಯ ಸಿಎಸ್ಐ ಬಾಲಿಕಾ ಶ್ರಮದ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಈ ಸಂದರ್ಭ ಆಶ್ರಮದ ಗೌರವಾಧ್ಯಕ್ಷ ಖ್ಯಾತ ಜ್ಯೋತಿಷಿ ವಿಶ್ವನಾಥ ಭಟ್ ಮಾತನಾಡಿ, ಶ್ರೀ ಚಂದ್ರಶೇಖರ ಸ್ವಾಮೀಜಿ ತಮ್ಮ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ. ನೊಂದ ಮಕ್ಕಳ ಬದುಕಿನಲ್ಲಿ ಸಂಭ್ರಮದ ಜೀವನದ ಕನಸನ್ನು ಕಾಣುತ್ತಿರುವ ಸ್ವಾಮೀಜಿಯವರ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.

ಬಡವರ, ದೀನ ದಲಿತರ ಉದ್ಧಾರವೇ ಆಶ್ರಮದ ಧ್ಯೇಯ ವಾಗಿದ್ದು ಇದಕ್ಕಾಗಿ ಆಶ್ರಮದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭ ಡಾ. ಶರತ್ ಶೆಟ್ಟಿ ಕಾರ್ನಾಡ್, ಉಷಾ ವಿಶ್ವನಾಥ ಭಟ್, ಮೂಡುಬಿದಿರೆ ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲ ಡಾ. ರೋಷನ್ ಪಿಂಟೊ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರಬೋದ್ ಕುಡ್ವ, ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಕೃಷ್ಣ, ಡಾ. ಜಗದೀಶ, ಡಾಕ್ಟರ್ ರೋಷನ್, ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕಾಪಿಕಾಡ್, ಕಾರ್ನಾಡ್ ಮೈಮುನಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಆಸೀಫ್, ಜಯಕರ್ನಾಟಕ ಮುಲ್ಕಿ ವಲಯ ಸಂಘಟನೆ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಕೆರೆಕಾಡು, ಶಂಕರ್ ಪಡಂಗ, ಪ್ರತಿಭಾ ಹೆಬ್ಬಾರ್, ಶಿವಾನಿ ಹೆಬ್ಬಾರ್, ಸಾಧನ ಹೆಬ್ಬಾರ್, ಆದಿತ್ಯ ಮುಲ್ಕಿ, ಹರೀಶ್ ಕಿಲ್ಪಾಡಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಮಾತೃಶ್ರೀ ಶಾರದಮ್ಮ, ಗಣೇಶ್ ಭಟ್, ಪುಷ್ಪಾ ಸಂಪತ್, ಸಂಚಾಲಕರಾದ ವಿಜಯಕುಮಾರ್, ಪುನೀತ ಕೃಷ್ಣ ಗೌತಮ್ ಮಂಜೇಶ್ವರ, ಮಂಜುನಾಥ, ಪ್ರದೀಪ್ ಗೌಡ, ಮಹೇಶ್ ಜಿ ಮತ್ತಿತರರು ಉಪಸ್ಥಿತರಿದ್ದರು.

ಪುನೀತ್ ಕೃಷ್ಣ ಸ್ವಾಗತಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News