ಮಂಗಳೂರು: ಫ್ಲ್ಯಾಟ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ?

Update: 2019-10-26 04:11 GMT

ಮಂಗಳೂರು, ಅ.26: ಅತ್ತಾವರದ ಅಪಾರ್ಟ್‌ಮೆಂಟ್‌ವೊಂದರ ಎರಡನೇ ಮಹಡಿಯ ರೂಂ ಒಂದರಲ್ಲಿ ವಿದಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ರಾತ್ರಿ ಸುಮಾರು 11ರ ವೇಳೆಗೆ ವಿದ್ಯಾರ್ಥಿನಿ ವಾಸವಿರುವ ರೂಂ ಬಾಗಿಲನ್ನು ತೆರೆದುನೋಡಿದಾಗ ವಿದ್ಯಾರ್ಥಿನಿ ಮೃತದೇಹ ಪ್ಯಾನಿಗೆ ನೇಣುಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಮೃತ ಯುವತಿಯನ್ನು ಕೇರಳದ ಎರ್ನಾಕುಲಂ ಮೂಲದ ಅನುಪಮಾ(23) ಎಂದು ಗುರುತಿಸಲಾಗಿದೆ. ಅನುಪಮಾ ನಗರದ ಖಾಸಗಿ ಆಸ್ಪತ್ರೆಯ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿದ್ದು, ಇವರ ತಾಯಿ ವಿದೇಶದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಅತ್ತಾವರದ ಅಪಾರ್ಟ್‌ಮೆಂಟಿನಲ್ಲಿ ಕಳೆದ ಒಂದು ವರ್ಷದಿಂದ ವಾಸವಿದ್ದಳು ತಿಳಿದು ಬಂದಿದೆ.

ಯಾವುದೋ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಯುವತಿ ಮೃತಪಟ್ಟ ವಿಷಯವನ್ನು ಎರ್ನಾಕುಲಂನ ಆಕೆಯ ಕುಟುಂಬಕ್ಕೆ ಸಂದೇಶ ರವಾನಿಸಲಾಗಿದ್ದು, ಶನಿವಾರ ಮಂಗಳೂರಿಗೆ ಆಗಮಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News