ಉಗ್ರರಿಂದ 2018ರಲ್ಲಿ 5 ವರ್ಷಗಳಲ್ಲೇ ಅತ್ಯಧಿಕ ಗಡಿ ನುಸುಳುವ ಯತ್ನ

Update: 2019-10-26 17:46 GMT

ಹೊಸದಿಲ್ಲಿ, ಅ. 26: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು 2018ರಲ್ಲಿ ಗಡಿ ಮೂಲಕ ಜಮ್ಮು ಕಾಶ್ಮೀರಕ್ಕೆ ನುಸುಳಲು 328 ಬಾರಿ ಪ್ರಯತ್ನಿಸಿದೆ. ಈ ಪ್ರಯತ್ನದಲ್ಲಿ 143 ಬಾರಿ ಸಫಲವಾಗಿದೆ. 2018ರಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನ ಐದು ವರ್ಷಗಳಲ್ಲೇ ಅತ್ಯಧಿಕ ಎಂದು ಗೃಹ ಸಚಿವಾಲಯದ ವಾರ್ಷಿಕ ವರದಿ ತಿಳಿಸಿದೆ.

ಶುಕ್ರವಾರ ಲಭ್ಯವಾಗಿರುವ ಗೃಹ ಸಚಿವಾಲಯ 2018-19ರ ಈ ವರದಿ, ಕಳೆದ ವರ್ಷ ಜಮ್ಮು ಹಾಗೂ ಕಾಶ್ಮೀರದಲ್ಲಿ 257 ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ 91 ಯೋಧರು ಹುತಾತ್ಮರಾಗಿದ್ದಾರೆ. 39 ನಾಗರಿಕರು ಮೃತಪಟ್ಟಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಸಾವು ನೋವು ಎಂದು ತಿಳಿಸಿದೆ.

ವರದಿಯ ಪ್ರಕಾರ 2018ರಲ್ಲಿ ಗಡಿಯ ಮೂಲಕ ಜಮ್ಮು ಹಾಗೂ ಕಾಶ್ಮೀರಕ್ಕೆ ನುಸುಳಲು ಪಾಕಿಸ್ತಾನ ಮೂಲದ ಭಯೋತ್ಪಾದಕರು 328 ಪ್ರಯತ್ನಗಳನ್ನು ಮಾಡಿದ್ದಾರೆ. ಇದರಲ್ಲಿ 143ರಲ್ಲಿ ಯಶಸ್ವಿಯಾಗಿದ್ದಾರೆ.

2017ರಲ್ಲಿ ಭಯೋತ್ಪಾದಕರು 419 ಒಳ ನುಸುಳುವಿಕೆಯ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ 136ರಲ್ಲಿ ಯಶಸ್ವಿಯಾಗಿದ್ದಾರೆ. 2016ರಲ್ಲಿ ಭಯೋತ್ಪಾದಕರು 371 ಒಳ ನುಸುಳುವ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ 119ರಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ಹೇಳಿದೆ.

2015ರಲ್ಲಿ ಭಯೋತ್ಪಾದಕರು ಒಟ್ಟು 121 ಒಳ ನುಸುಳುವ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ 33ರಲ್ಲಿ ಯಶಸ್ವಿಯಾಗಿದ್ದಾರೆ. 2014ರಲ್ಲಿ ಭಯೋತ್ಪಾದಕರು 222 ಒಳನುನುಸುಳುವ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ 65ರಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

‘‘2018ರಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದ 614 ಭಯೋತ್ಪಾದಕ ದಾಳಿಯಲ್ಲಿ ಒಟ್ಟು 257 ಭಯೋತ್ಪಾದಕರು ಹತರಾಗಿದ್ದಾರೆ, 91 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 39 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ 2018ರಲ್ಲಿ ನಡೆದ ಭಯೋತ್ಪಾದಕ ಘಟನೆಗಳು ಹಾಗೂ ಯೋಧರು, ಉಗ್ರರ ಸಾವು ನೋವು ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಎಂದು ಅದು ಹೇಳಿದೆ.

ರಾಜ್ಯದಲ್ಲಿ 2017ರಲ್ಲಿ ನಡೆದ 342 ಭಯೋತ್ಪಾದಕ ಘಟನೆಗಳಲ್ಲಿ 213 ಭಯೋತ್ಪಾದಕರು ಹತರಾಗಿದ್ದಾರೆ, 80 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 40 ನಾಗರಿಕರು ಸಾವನ್ನಪ್ಪಿದ್ದಾರೆ.

 2016ರಲ್ಲಿ 322 ಭಯೋತ್ಪಾದಕ ಘಟನೆಗಳಲ್ಲಿ ಒಟ್ಟು 150 ಭಯೋತ್ಪಾದಕರು ಹತರಾಗಿದ್ದಾರೆ, 82 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 15 ನಾಗರಿಕರು ಸಾವನ್ನಪ್ಪಿದ್ದಾರೆ. 2015ರಲ್ಲಿ 208 ಭಯೋತ್ಪಾದಕ ಘಟನೆಗಳಲ್ಲಿ 108 ಭಯೋತ್ಪಾದಕರು ಹತರಾಗಿದ್ದಾರೆ, 39 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 17 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

 2014ರಲ್ಲಿ 222 ಭಯೋತ್ಪಾದಕ ಘಟನೆಗಳಲ್ಲಿ ಒಟ್ಟು 110 ಭಯೋತ್ಪಾದಕರು ಹತರಾಗಿದ್ದಾರೆ, 47 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 28 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News