×
Ad

ನನ್ನ ತಂದೆಯೇ ನಿಜ ಜೀವನದ ಸೂಪರ್‌ ಹೀರೋ: ಕೊಹ್ಲಿ

Update: 2019-10-26 23:34 IST

ಮುಂಬೈ, ಅ.26: ನನ್ನ ತಂದೆ ತೆಗೆದುಕೊಂಡ ನಿರ್ಧಾರದಿಂದಾಗಿ ನನ್ನ ವೃತ್ತಿಜೀವನದ ಹಾದಿ ಸುಲಭವಾಗಿತ್ತು. ಹೀಗಾಗಿ ಅವರು ನನ್ನ ನಿಜ ಜೀವನದ ಸೂಪರ್‌ಹೀರೋ ಆಗಿದ್ದಾರೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಹೇಳಿದ್ದಾರೆ. ನನ್ನ ತಂದೆ ಈ ಜಗತ್ತಿನಲ್ಲಿದ್ದ ತನಕ ಅವರು ನನ್ನ ಪಾಲಿಗೆ ಯಾವಾಗಲೂ ಸೂಪರ್ ಹೀರೊ ಆಗಿದ್ದರು ಎಂದು ನಿಮ್ಮ ಜೀವನದ ಸೂಪರ್‌ಹೀರೊ ಯಾರು ಎಂಬ ಪ್ರಶ್ನೆಗೆ ಕೊಹ್ಲಿ ಪ್ರತಿಕ್ರಿಯಿಸಿದರು.

ಹಲವರು ನಿಮಗೆ ಸ್ಫೂರ್ತಿಯಾಗಬಹುದು ಅಥವಾ ಪ್ರೇರೇಪಿಸಬಹುದು. ಆದರೆ, ಯಾರಾದರೂ ನಿಮ್ಮ ಮುಂದೆ ಒಂದು ನಿದರ್ಶನ ನೀಡಿದಾಗ ಪರಿಣಾಮ ಭಿನ್ನವಾಗಿರುತ್ತದೆ. ನಾನು ಕ್ರಿಕೆಟ್ ಆಡುತ್ತಿದ್ದ ಆರಂಭಿಕ ದಿನಗಳಲ್ಲಿ ನನ್ನ ವೃತ್ತಿಜೀವನದ ಕುರಿತು ತಂದೆಯೇ ನಿರ್ಧಾರ ಕೈಗೊಳ್ಳುತ್ತಿದ್ದರು. ಅವರ ನಿರ್ಧಾರ ಹಾಗೂ ವ್ಯಕ್ತಿತ್ವದಿಂದಾಗಿ ಕಠಿಣ ಪರಿಶ್ರಮದ ಆಧಾರದಲ್ಲಿ ಮುನ್ನಡೆಯುವತ್ತ ಗಮನ ಹರಿಸಿದ್ದೆ. ಹೀಗಾಗಿ ನನ್ನ ವೃತ್ತಿಜೀವನದ ಹಾದಿಯೂ ಸುಲಭವಾಯಿತುಎಂದು ಆಧುನಿಕ ಕ್ರಿಕೆಟ್‌ನ ಓರ್ವ ಯಶಸ್ವಿ ಬ್ಯಾಟ್ಸ್ ಮನ್ ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News