ಮೋದಿಯನ್ನು ಹೊಗಳಿ ಅಗ್ರ ಮಹಿಳಾ ಕ್ರೀಡಾಪಟುಗಳು ಒಂದೇ ರೀತಿಯ ಟ್ವೀಟ್ ಮಾಡಿದ್ದು ಹೇಗೆ?

Update: 2019-10-27 08:50 GMT

ಹೊಸದಿಲ್ಲಿ, ಅ.27: "ಈ ದೀಪಾವಳಿ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸುವ, ಸಬಲೀಕರಿಸುವ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಈ ಗೌರವ ನಮಗೆ ಇನ್ನಷ್ಟು ಕಠಿಣವಾಗಿ ಶ್ರಮ ವಹಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಸ್ಫೂರ್ತಿಯಾಗಲಿದೆ. #bharatkilaxmi...."

ಇದು ಮೇರಿ ಕೋಮ್ ಅವರಿಂದ ಹಿಡಿದು ಪೂಜಾ ಧಾಂಡ, ಪಿ.ವಿ.ಸಿಂಧು ಅವರಿಂದ ಹಿಡಿದು ಸೈನಾ ನೆಹ್ವಾಲ್ ಹೀಗೆ ಭಾರತದ ಅಗ್ರ ಮಹಿಳಾ ಕ್ರೀಡಾಪಟುಗಳು ದೀಪಾವಳಿ ಸಂದರ್ಭ ಮಾಡಿರುವ ಟ್ವೀಟ್. ಹೀಗೆ ಒಂದೇ ಬಗೆಯ ಟ್ವೀಟ್‍ ಗಳು ಬಹಳಷ್ಟು ಮಂದಿ ಕ್ರೀಡಾಗಾರ್ತಿಯರ ಅಧಿಕೃತ ಟ್ವಿಟರ್ ಹ್ಯಾಂಡಲ್‍ ನಿಂದ ಟ್ವೀಟ್ ಆಗಿದ್ದು, ಈ ಕ್ರೀಡಾಪಟುಗಳು ಸ್ವತಃ ಅವರೇ ಟ್ವೀಟ್ ಮಾಡಿರದೆ ಅವರಿಗೆ ಟೆಕ್ಸ್ಟ್ ಗಳನ್ನು ಕಳುಹಿಸಿ ಟ್ವೀಟ್ ಮಾಡಿಸಲಾಗಿದೆ ಎನ್ನುವ ಅಭಿಪ್ರಾಯಗಳು ಟ್ವಿಟರ್ ನಲ್ಲಿ ವ್ಯಕ್ತವಾಗಿವೆ.

ಬಹುತೇಕ ಮಹಿಳಾ ಕ್ರೀಡಾಪಟುಗಳು ಹೀಗೆ ಟ್ವೀಟ್ ಮಾಡಿದ್ದಾರೆ ಅಥವಾ ಯುವಜನ ಖಾತೆ ಮತ್ತು ಕ್ರೀಡಾ ಖಾತೆ ಸಚಿವ ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದಾರೆ. ಮುಜುಗರದ ಅಂಶವೆಂದರೆ ಕೆಲವರು ತಮಗೆ ಕಳುಹಿಸಿದ ಟ್ವೀಟ್ ಮಾಡಬೇಕಾದ ಸಂದೇಶದಲ್ಲಿದ್ದ "ಟೆಕ್ಸ್ಟ್" ಎಂಬ ಪದವನ್ನು ಡಿಲಿಟ್ ಮಾಡಲು ಮರೆತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಪೂಜಾ ಧಾಂಡ ಅವರ ಟ್ವೀಟ್ ಇದೆ. ಹಲವರು ಈ ಪ್ರಮಾದದ ಬಗ್ಗೆ ಎತ್ತಿತೋರಿಸಿದ ಬಳಿಕ ಪೂಜಾ ಡಿಲೀಟ್ ಮಾಡಿದ್ದಾರೆ.

ಪಿ.ವಿ.ಸಿಂಧು ಹಾಗೂ ದೀಪಿಕಾ ಪಡುಕೋಣೆ ಅವರು ಇರುವ ವಿಡಿಯೊದೊಂದಿಗೆ #bharatkilaxmi ಕುರಿತ ಟ್ವೀಟ್‍ನ ಸಂಯೋಜಿತ ಅಭಿಯಾನ ಕೆಲ ದಿನಗಳ ಹಿಂದೆ ಆರಂಭವಾಗಿತ್ತು. "#bharatkilaxmi ಕ್ಯಾಂಪೇನ್ ಗಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ" ಎಂದು ಸಿಂಧು ಮಾಡಿದ ಟ್ವೀಟನ್ನು ಮೋದಿ ಮರುಟ್ವೀಟ್ ಮಾಡಿದ್ದರು.

ಇದಾದ ನಾಲ್ಕು ದಿನಗಳ ಬಳಿಕ ಒಂದೇ ಬಗೆಯ ಟ್ವೀಟನ್ನು ಬಹುತೇಕ ಎಲ್ಲ ಪ್ರಮುಖ ಮಹಿಳಾ ಕ್ರೀಡಾಪಟುಗಳು ಮಾಡಿದ್ದಾರೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News