ಕಾಸರಗೋಡು : ಬಸ್ ಢಿಕ್ಕಿ ; ಮಹಿಳೆ ಮೃತ್ಯು

Update: 2019-10-28 13:27 GMT

ಕಾಸರಗೋಡು : ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಕಾಸರಗೋಡು ನಗರದಲ್ಲಿ ನಡೆದಿದೆ.

ನಗರದ ಬ್ಯಾಂಕ್  ರಸ್ತೆಯಲ್ಲಿ ಈ ಘಟನೆ ನಡೆದಿದೆ.  

ಮೃತ ಮಹಿಳೆ 60 ವರ್ಷ ಪ್ರಾಯ ಅಂದಾಜಿಸಲಾಗಿದ್ದು , ಗುರುತು ಪತ್ತೆಯಾಗಿಲ್ಲ .  ರಸ್ತೆ  ದಾಟುತ್ತಿದ್ದಾಗ  ಖಾಸಗಿ ಬಸ್ಸು  ಬಡಿದಿದ್ದು, ರಸ್ತೆಗೆ ಬಿದ್ದ ಮಹಿಳೆಯ ದೇಹದ ಮೇಲೆ ಬಸ್ ಹರಿದಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News