24 ನಿಮಿಷಕ್ಕೂ ಅಧಿಕ ಮೊಬೈಲ್ ಫೋನ್ ಬಳಕೆ ಅಪಾಯಕಾರಿ

Update: 2019-10-30 14:15 GMT

ಮೊಬೈಲ್ ಫೋನ್‌ಗಳು ಮತ್ತು ಅವುಗಳ ಟವರ್‌ಗಳು ಹೊರಸೂಸುವ ವಿಕಿರಣಗಳು ಮಹಿಳೆಯರಲ್ಲಿ ಫಲವತ್ತತೆ ನಷ್ಟಕ್ಕೆ ಪ್ರಮುಖ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಯ ಅಧ್ಯಯನವೊಂದು ತಿಳಿಸಿದೆ.

ಮೊಬೈಲ್ ಫೋನ್‌ಗಳ ನಿರಂತರ ಬಳಕೆಯು ಸದಾ ಪ್ರಶ್ನೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ ಮತ್ತು ಮಹಿಳೆಯರಲ್ಲಿ ಫಲವತ್ತತೆ ಕುಂಠಿತ ಸೇರಿದಂತೆ ಮೊಬೈಲ್ ವಿಕಿರಣದ ದುಷ್ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು ಬಹಿರಂಗಗೊಳಿಸಿವೆ. ಇಷ್ಟೇ ಅಲ್ಲ,ಮೊಬೈಲ್ ವಿಕಿರಣವು ಮಿದುಳು ಟ್ಯೂಮರ್‌ಗಳನ್ನೂ ಉಂಟು ಮಾಡುತ್ತದೆ.

ಸ್ಮಾರ್ಟ್‌ಫೋನ್‌ಗಳ ನಿರಂತರ ಬಳಕೆ ನಮ್ಮ ಪ್ರತಿದಿನದ ಬದುಕಿನ ಭಾಗವಾಗಿಬಿಟ್ಟಿದೆ,ಆದರೆ ಮನಸ್ಸು ಮತ್ತು ಶರೀರದ ಮೇಲೆ ಅದರ ದುಷ್ಪರಿಣಾಮಗಳ ಬಗ್ಗೆಯೂ ಮೊಬೈಲ್ ಬಳಕೆದಾರರು ತಿಳಿದಿರಬೇಕು.

   ಮೊಬೈಲ್ ಫೋನ್‌ಗಳು ಹೊರಸೂಸುವ ವಿಕಿರಣಗಳು ಕ್ಯಾನ್ಸರ್‌ನ್ನುಂಟು ಮಾಡುವ ಅಪಾಯವಿದೆ ಎನ್ನುವುದನ್ನು ಡಬ್ಲ್ಯುಎಚ್‌ಒ ಸಂಶೋಧನೆಯು ಬಹಿರಂಗಗೊಳಿಸಿದೆ. ಸೆಲ್ ಫೋನ್‌ಗಳನ್ನು ಬಳಸಿದ್ದ ಹಲವಾರು ಯುವಜನರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹಂಗೇರಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮೊಬೈಲ್ ಟವರ್‌ನ 400 ಮೀಟರ್‌ಗಳ ಪ್ರದೇಶದಲ್ಲಿರುವವರಲ್ಲಿ ಕ್ಯಾನ್ಸರ್ ಅಪಾಯದ ಸಂಭವನೀಯತೆ ಮೂರು ಪಟ್ಟುಗಳಷ್ಟು ಹೆಚ್ಚಾಗಿರುವುದನ್ನು ಜರ್ಮನಿಯಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಈ 400 ಮೀ.ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‌ಗಳ ಪ್ರಸರಣವು ಇತರ ಕಡೆಗಳಿಂತ 100 ಪಟ್ಟು ಹೆಚ್ಚಾಗಿರುತ್ತದೆ.

ಮೊಬೈಲ್ ಫೋನ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣದಿಂದಾಗಿ ಜೇನುನೊಣಗಳ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎಂದು ಕೇರಳದಲ್ಲಿ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.

ಸೆಲ್ ಫೋನ್ ಟವರ್‌ಗಳ ಸಮೀಪದಲಿ ಕಾಗೆಗಳು ಇಟ್ಟ ಮೊಟ್ಟೆಗಳು 30 ದಿನಗಳ ಬಳಿಕವೂ ಮರಿಗಳಾಗಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಗೆ ಬರುತ್ತವೆ.

ಮೊಬೈಲ್ ಫೋನ್‌ಗಳ ದೀರ್ಘ ಬಳಕೆಯು ಟ್ಯೂಮರ್‌ಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನೂ ಅಧ್ಯಯನಗಳು ಸೂಚಿಸಿವೆ.

ಫೋನ್ ವಿಕಿರಣಗಳೂ ಆರೋಗ್ಯಕ್ಕೆ ಅಪಾಯಗಳೂ.....

 ಮೊಬೈಲ್ ಫೋನ್ ವಿಕಿರಣವು ತಲೆನೋವು,ತಲೆಯೊಳಗೆ ಜುಮ್ಮೆನಿಸುವಿಕೆ,ನಿರಂತರ ಬಳಲಿಕೆ,ತಲೆ ಸುತ್ತುವಿಕೆ, ಖಿನ್ನತೆ,ನಿದ್ರಾಹೀನತೆ,ಮಂಪರು ನಿದ್ರೆ,ಕಣ್ಣಿನ ತೊಂದರೆ,ಏಕಾಗ್ರತೆ ನಷ್ಟ, ಕಿವಿಗಳಲ್ಲಿಗಂಟೆ ಬಾರಿಸಿದ ಅನುಭವ,ಶ್ರವಣ ಶಕ್ತಿ ಮತ್ತು ಜ್ಞಾಪಕ ಶಕ್ತಿ ನಷ್ಟ,ಅಜೀರ್ಣ ಸಮಸ್ಯೆ,ಅನಿಯಮಿತ ಹೃದಯಬಡಿತ,ಸಂದು ನೋವು ಇತ್ಯಾದಿಗಳಿಗೆ ಕಾರಣವಾಗುತ್ತೆ ಎನ್ನುತ್ತಾರೆ ತಜ್ಞರು.

ಮೊಬೈಲ್ ವಿಕಿರಣವು ಫಲವತ್ತತೆ ನಷ್ಟ,ಕ್ಯಾನ್ಸರ್,ಮಿದುಳು ಟ್ಯೂಮರ್ ಮತ್ತು ಗರ್ಭಪಾತಕ್ಕೂ ಕಾರಣವಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ. ನಮ್ಮ ಶರೀರದ ಶೇ.70ರಷ್ಟು ಭಾಗ ನೀರು ಆಗಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ನಮ್ಮ ಮಿದುಳಿನ ಶೇ.90ರಷ್ಟು ಭಾಗವೂ ನೀರೇ ಆಗಿದೆ. ಈ ನೀರು ಕ್ರಮೇಣ ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಸದಾ ಕಾಲ ಮೊಬೈಲ್ ಫೋನ್ ಬಳಸುವವರು ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ ಎಂದು ಡಬ್ಲುಎಚ್‌ಒ ವರದಿ ತಿಳಿಸಿದೆ.

   ವಿಕಿರಣ ಎಲ್ಲರಿಗೂ ಹಾನಿಕಾರಕ,ಆದರೆ ಮಕ್ಕಳು,ಮಹಿಳೆಯರು ಮತ್ತು ವಯಸ್ಸಾದವರನ್ನು ಹೆಚ್ಚು ಬಾಧಿಸುತ್ತದೆ. ಮಕ್ಕಳು ಮತ್ತು ಹದಿಹರೆಯದವರು ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯಬಾರದು ಮತ್ತು ಸ್ಪೀಕರ್ ಫೋನ್ ಅಥವಾ ಹ್ಯಾಂಡ್‌ಸೆಟ್‌ಗಳನ್ನು ತಲೆ ಮತ್ತು ಮೊಬೈಲ್ ನಡುವೆ ಸಾಕಷ್ಟು ಅಂತರವಿರುವಂತೆ ಬಳಸಬೇಕು . ಮಕ್ಕಳು ಮತ್ತು ಗರ್ಭಿಣಿಯರು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಬೇಕು.

  ದಿನಕ್ಕೆ 24 ನಿಮಿಷಗಳ ಮೊಬೈಲ್ ಬಳಕೆಯು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ ಎಂದು ಪರಿಗಣಿಸಲಾಗಿದೆ. ನಿಮ್ಮ ಫೋನಿನ ಸ್ಪೆಸಿಫಿಕ್ ಅಬ್ಸಾರ್ಪ್ಶನ್ ರೇಟ್ (ಎಸ್‌ಎಆರ್ ) ಅಥವಾ ನಿರ್ದಿಷ್ಟ ಹೀರುವಿಕೆ ದರ ನಿಮಗೆ ತಿಳಿದಿರುವುದು ಅಗತ್ಯವಾಗಿದೆ. ಹೆಚ್ಚು ಎಸ್‌ಎಆರ್ ವ್ಯಾಲ್ಯು ಹೊಂದಿರುವ ಪೋನ್‌ನಲ್ಲಿ ಕಡಿಮೆ ಮಾತನಾಡುವುದು ಕಡಿಮೆ ಎಸ್‌ಎಆರ್ ವ್ಯಾಲ್ಯೂ ಹೊಂದಿರುವ ಫೋನ್‌ನಲ್ಲಿ ಹೆಚ್ಚು ಮಾತನಾಡುವುದಕ್ಕಿಂತ ಹೆಚ್ಚು ಹಾನಿಕಾರಕವಾಗಿದೆ. ವಿಕಿರಣದಿಂದ ತಪ್ಪಿಸಿಕೊಳ್ಳಲು ಸುದೀರ್ಘ ಸಂಭಾಷಣೆಗೆ ಸ್ಥಿರ ದೂರವಾಣಿಯ ಬಳಕೆ ಸುಲಭ ಮಾರ್ಗವಾಗಿದೆ.

1000ದಿಂದ 3000 ಎಂಎಚ್‌ಝಡ್‌ವರೆಗಿನ ವಿದ್ಯುತ್‌ಕಾಂತೀಯ ಅಲೆಗಳು ಮೈಕ್ರೊವೇವ್ ವಿಕಿರಣವನ್ನುಂಟು ಮಾಡುತ್ತವೆ. ಮೈಕ್ರೋವೇವ್ ಓವನ್,ಏರ್ ಕಂಡಿಷನರ್,ನಿಸ್ತಂತು ಕಂಪ್ಯೂಟರ್,ಕಾರ್ಡ್‌ಲೆಸ್ ಫೋನ್ ಮತ್ತು ಇತರ ವೈರ್‌ಲೆಸ್ ಸಾಧನಗಳೂ ವಿಕಿರಣವನ್ನು ಸೂಸುತ್ತವೆ. ಆದರೆ ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಬಳಕೆ ಮತ್ತು ಶರೀರಕ್ಕೆ ಅದರ ಸಾಮೀಪ್ಯದಿಂದಾಗಿ ಮೊಬೈಲ್ ವಿಕಿರಣವು ಅತ್ಯಂತ ಅಪಾಯಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News