ಆ್ಯಪಲ್ ಮಾರ್ಟ್ ವಾರ್ಷಿಕೋತ್ಸವ: ಎಪ್ಪತ್ತೈದು ಅದೃಷ್ಟ ಖರೀದಿದಾರರಿಗೆ ಉಚಿತ ಶಾಪಿಂಗ್

Update: 2019-10-31 08:43 GMT

ಮಂಗಳೂರು, ಅ.31: ನಗರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸುಪರ್ ಮಾರ್ಕೆಟ್ ಚೈನ್ ನಲ್ಲಿ ಒಂದಾಗಿರುವ ಆ್ಯಪಲ್ ಮಾರ್ಟ್ ಸಂಸ್ಥೆಯೂ ತನ್ನ ವಾರ್ಷಿಕೋತ್ಸವದ ಅಂಗವಾಗಿ ಅ.28ರಿಂದ ನವೆಂಬರ್ 3ರವರೆಗೆ ಏಳು ದಿನಗಳ ‘ವಾರ್ಷಿಕೋತ್ಸವ ಧಮಾಕ ಸೇಲ್’ ಹಮ್ಮಿಕೊಂಡಿದೆ. ಧಮಾಕ ಸೇಲ್ ಪ್ರಯುಕ್ತ ಆಯ್ಕೆಯಾಗುವ ಎಪ್ಪತ್ತೈದು ಅದೃಷ್ಟ ಖರೀದಿದಾರರು ಉಚಿತ ಶಾಪಿಂಗ್ ಅವಕಾಶ ಪಡೆಯಲಿದ್ದಾರೆ.

ಉಚಿತ ಶಾಪಿಂಗ್:

ಧಮಾಕ ಸೇಲ್ ಸಮಯದಲ್ಲಿ ಖರೀದಿ ಮಾಡುವ ಪ್ರತಿಯೊಂದು ಬಿಲ್ಲನ್ನು ಉಚಿತ ಶಾಪಿಂಗ್ ಗೆ ಪರಿಗಣಿಸಲಾಗುತ್ತದೆ. ಲಕ್ಕಿ ಡ್ರಾದಲ್ಲಿ ವಿಜೇತರಾದ ಎಪ್ಪತ್ತೈದು ಗ್ರಾಹಕರಿಗೆ ಅವರು ಖರೀದಿ ಮಾಡಿದ ಬಿಲ್ಲಿನ ಮೊತ್ತದಷ್ಟೇ ಉಚಿತ ಶಾಪಿಂಗ್ ನೀಡುವ ವಿನೂತನ ಯೋಜನೆ ಇದಾಗಿದೆ

ಉಚಿತ  ಶಾಪಿಂಗ್ ಯೋಜನೆ ಜೊತೆಗೆ ಧಮಾಕ ಸೇಲ್ ನಲ್ಲಿ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ  ಗುಣಮಟ್ಟದ ಸಾಮಾಗ್ರಿಗಳ ಪೂರೈಕೆ,  "ಓನ್ ಪ್ಲೋರ್ ಫ್ಲಾಶ್‌ ಆಫರ್"  ಹಾಗೂ  ಇನ್ನಿತರ ಹಲವು ಆಕರ್ಷಕಕಾರಿ ಯೋಜನೆ ಜೋತೆಗೆ ಗ್ರಾಹಕರರನ್ನು ಮನೋರಂಜಿಸಲು ವಿವಿಧ ರೀತಿಯ ವಿನೋದ ಆಟಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News