ಸಾವರ್ಕರ್ ವಿರುದ್ಧ ಮಾತನಾಡುವವರು ರಾಷ್ಟ್ರ ವಿರೋಧಿಗಳು: ನಳಿನ್ ಕುಮಾರ್ ಕಟೀಲ್

Update: 2019-10-31 12:38 GMT

ಪಡುಬಿದ್ರಿ: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ನಾವಿಂದು ಭಾರತರತ್ನವನ್ನು ಪ್ರದಾನ ಮಾಡಬೇಕಾಗಿದೆ. ಸ್ವಾತಂತ್ರದ ಎಲ್ಲಾ ಲಾಭಗಳನ್ನು ಪಡೆದು ಅಧಿಕಾರ ಪಡೆದವರು ಸಾರ್ವಕರ್ ವಿರುದ್ಧ ಮಾತನಾಡುವವರು ರಾಷ್ಟ್ರ ವಿರೋಧಿಗಳು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಹೆಜಮಾಡಿಯಲ್ಲಿ ಗುರುವಾರ ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಾಪು ಮಂಡಲದ ಸಹಯೋಗದಲ್ಲಿ ಏರ್ಪಡಿಸಲಾದ 'ಏಕತೆಗಾಗಿ ಓಟ' ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಓಟದಲ್ಲಿ ಭಾಗವಹಿಸಿ ಹೆಜಮಾಡಿ ಪೇಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಸರ್ದಾರ್ ವಲ್ಲಭಾಯಿ ಪಟೇಲರು ರಾಷ್ಟ್ರದ ಏಕತೆಯ ಪ್ರತೀಕವಾಗಿರುವ ಅವರ ಬಗೆಗಿನ ಚಿಂತನೆಯ ಹಾದಿಯಲ್ಲಿ ಭಾರತವನ್ನು ಒಂದುಗೂಡಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಏಕತಾ ದಿನಾಚರಣೆಯ ಮೂಲಕ ಮಾಡಿದ್ದಾರೆ. ಸ್ವಾತಂತ್ರ್ಯಾನಂತರದ ಭಾರತವು ಹರಿದು ಹಂಚಾಗಿದ್ದ ವೇಳೆ ಅವೆಲ್ಲವನ್ನೂ ಒಗ್ಗೂಡಿಸಿದವರು ಸರ್ದಾರ್ ವಲ್ಲಭಾಯಿ ಪಟೇಲರಾಗಿದ್ದಾರೆ. ಹಾಗಾಗಿ ಗೋವ, ಹೈದರಾಬಾದ್, ಜಮ್ಮು, ಕಾಶ್ಮೀರಗಳು ಭಾರತದಲ್ಲಿ ಅವರಿಂದಾಗಿ ಉಳಿಯುವಂತಾದವು ಎಂದು ಅವರು ಹೇಳಿದರು.

ರಾಜ್ಯಾಧ್ಯಕ್ಷ ನಳಿನ್ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿ ಏಕತಾ ಓಟಕ್ಕೆ ಚಾಲನೆಯನ್ನು ನೀಡಿದರು. ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್‍ಕುಮಾರ್,  ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ,  ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‍ರತ್ನಾಕರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್, ದ.ಕ. ಬಿಜೆಪಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡರಾದ ಸುರೇಶ್  ಶೆಟ್ಟಿ ಗುರ್ಮೆ, ಉದಯ ಕುಮಾರ್ ಶೆಟ್ಟ, ನವೀನ್ ಶೆಟ್ಟಿ ಕುತ್ಯಾರ್,  ಕುಯಿಲಾಡಿ ಸುರೇಶ್ ನಾಯಕ್,  ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಶಶಿಕಾತ್ ಪಡುಬಿದ್ರಿ, ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ವಿಶಾಲಾಕ್ಷಿ ಪುತ್ರನ್, ಶಂಭುದಾಸ್ ಗುರೂಜಿ, ಉದಯ ಕುಮಾರ್ ಶೆಟ್ಟಿ ಇನ್ನ, ಮಿಥುನ್ ಆರ್. ಹೆಗ್ಡೆ, ಗಂಗಾಧರ ಹುವರ್ಣ, ಪ್ರಸಾದ್ ಕುತ್ಯಾರ್, ಪವಿತ್ರಾ ಶೆಟ್ಟಿ, ವೀಣಾ ಶೆಟ್ಟಿ, ಗಾಯತ್ರಿ ಪ್ರಭು, ಕಿಶೋರ್ ರೈ, ಸತ್ಯೇಂದ್ರ ಶೆಣೈ, ಬಿಜೆಪಿ ಕಾರ್ಯಕರ್ತರು ಮತ್ತಿತರಿದ್ದರು.
ಶಿವಪ್ರಸಾದ್ ಶೆಟ್ಟ ಎಲ್ಲದಡಿ ಸ್ವಾಗತಿಸಿದರು. ಶರಣ್ ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News