ಉ. ಕೊರಿಯದಿಂದ 2 ಕ್ಷಿಪಣಿಗಳ ಉಡಾವಣೆ: ದಕ್ಷಿಣ ಕೊರಿಯ ಸೇನೆ

Update: 2019-10-31 16:11 GMT

ಸಿಯೋಲ್, ಅ. 31: ಉತ್ತರ ಕೊರಿಯ ಗುರುವಾರ ಎರಡು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯದ ಸೇನೆ ತಿಳಿಸಿದೆ.

ಕ್ಷಿಪಣಿಗಳನ್ನು ದಕ್ಷಿಣ ಪ್ಯಾಂಗನ್ ಪ್ರಾಂತದಿಂದ ಸಮುದ್ರದಲ್ಲಿ ಪೂರ್ವಾಭಿಮುಖವಾಗಿ ಹಾರಿಸಲಾಯಿತು ಎಂದು ದಕ್ಷಿಣ ಕೊರಿಯದ ಸೇನಾ ದಂಡನಾಯಕ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ, ಯಾವ ಮಾದರಿಯ ಕ್ಷಿಪಣಿಯನ್ನು ಹಾರಿಸಲಾಗಿದೆ ಎನ್ನುವುದನ್ನು ಅವರು ತಿಳಿಸಲಿಲ್ಲ.

‘‘ಇನ್ನೂ ಹೆಚ್ಚಿನ ಕ್ಷಿಪಣಿಗಳನ್ನು ಹಾರಿಸಲಾಗುತ್ತಿದ್ದೆಯೇ ಎನ್ನುವುದರ ಮೇಲೆ ನಾವು ನಿಗಾ ಇಟ್ಟಿದ್ದೇವೆ’’ ಎಂದರು.

ಉತ್ತರ ಕೊರಿಯದ ಪರಮಾಣು ನಿಶ್ಶಸ್ತ್ರೀಕರಣ ವಿಷಯದಲ್ಲಿ ಉತ್ತರ ಕೊರಿಯ ಮತ್ತು ಅಮೆರಿಕಗಳ ನಡುವಿನ ಶಾಂತಿ ಮಾತುಕತೆಗಳು ಸ್ಥಗಿತಗೊಂಡ ಬಳಿಕ, ಉತ್ತರ ಕೊರಿಯ ಕ್ಷಿಪಣಿಗಳ ಹಾರಾಟವನ್ನು ಮುಂದುವರಿಸಿದೆ. ಅಕ್ಟೋಬರ್ 2ರಂದು ಅದು ಸಮುದ್ರದಿಂದ ಕ್ಷಿಪಣಿಯೊಂದನ್ನು ಹಾರಿಸಿತ್ತು. ಸಬ್‌ಮರೀನ್ ಆಧರಿತ ಕ್ಷಿಪಣಿ ಸಾಮರ್ಥ್ಯವು ವಲಯದ ಸೇನಾ ಸಮತೋಲನವನ್ನು ಬದಲಾಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News