ಜಪಾನ್ ಪ್ರಧಾನಿಯ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

Update: 2019-11-03 15:52 GMT

ಟೋಕಿಯೊ,ನ.3: ಜಪಾನ್ ಪ್ರಧಾನಿ ಶಿಂಝೊ ಅಬೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಾರಾಟದ ಮಧ್ಯೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ತಕ್ಷಣವೇ ನಂದಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ.

   ಅಸಿಯಾನ್ ಶೃಂಗಸಭೆಯ ಮಾತುಕತೆಯಲ್ಲಿ ಪಾಲ್ಗೊಳ್ಳಲು ಶಿಂರೊ ಅವರು ಟೊಕಿಯೋದಿಂದ ಬ್ಯಾಂಕಾಕ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆಯೆಂದು ಮೂಲಗಳು ತಿಳಿಸಿವೆ. ವಿಮಾನವು ಹಾರಾಟ ಆರಂಭಿಸಿದ ಒಂದು ತಾಸಿನ ಬಳಿಕ, ವಿಮಾನದ ಒಲೆಯಲ್ಲಿ ಸಣ್ಣ ಮಟ್ಟದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿರುವುದಾಗಿ ವಿಮಾನದಲ್ಲಿ ಘೋಷಿಸಲಾಯಿತು ಎಂದು ಅಸಾಹಿ ಶಿಂಬೂನ್ ದಿನಪತ್ರಿಕೆ ವರದಿ ಮಾಡಿದೆ.

ಇದಾದ ಹತ್ತು ನಿಮಿಷಗಳ ಬಳಿಕ ಬೆಂಕಿಯನ್ನು ನಂದಿಸಲಾಯಿತು. ಆದರೆ ಯಾವುದೇ ಹೊಗೆೆ ಅಥವಾ ಕರಟಿದ ವಾಸನೆ ಪತ್ತೆಯಾಗಿಲ್ಲವೆಂದು ಪತ್ರಿಕೆಯು ತನ್ನ ಆನ್‌ಲೈನ್ ಲೇಖನದಲ್ಲಿ ತಿಳಿಸಿದೆ. ಆಬೆ ಅವರ ಪ್ರಯಾಣದಲ್ಲಿ ಯಾವುದೇ ಬದಲಾವಣೆ ಯಾಗಿಲ್ಲವೆಂದು ಮಾಧ್ಯಮ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News