ಪಳೆಯುಳಿಕೆ ಜನ್ಯ ಇಂಧನ ಬಳಕೆ ವಿರುದ್ಧ ಪ್ರತಿಭಟನೆ: ನಟಿ ಜೇನ್‌ಫೋಂಡಾ ಬಂದನ

Update: 2019-11-03 16:06 GMT

 ವಾಶಿಂಗ್ಟನ್,ನ.3: ಪರಿಸರ ಬದಲಾವಣೆ ಕುರಿತು ಅಮೆರಿಕದ ರಾಜಧಾನಿ ವಾಶಿಂಗ್ಟನ್‌ನಲ್ಲಿರುವ ರಾಜತಾಂತ್ರಿಕ ಪ್ರದೇಶ ಕ್ಯಾಪಿಟಲ್ ಹಿಲ್‌ನಲ್ಲಿ ಹಲವಾರುಗಳಿಂದ ಪ್ರತಿಭಟನೆ ನಡೆಸುತ್ತಿರುವ ಖ್ಯಾತ ನಟಿ ಹಾಗೂ ಪರಿಸರ ಪರ ಹೋರಾಟಗಾರ್ತಿ ಜೇನ್‌ಫೋಂಡಾ ಅವರು ಶುಕ್ರವಾರ ನಾಲ್ಕನೆ ಬಾರಿಗೆ ಬಂಧನಕ್ಕೊಳಗಾಗಿದ್ದು, ಒಂದು ರಾತ್ರಿಯನ್ನು ಜೈಲಿನಲ್ಲಿ ಕಳೆದಿದ್ದಾರೆ.

 ಸೆನೆಟ್ ಕಾರ್ಯಾಲಯ ಕಟ್ಟಡದ ಆವರಣದಲ್ಲಿ ಧರಣಿ ನಡೆಸಿದ 81 ವರ್ಷದ ಆಸ್ಕರ್ ಪುರಸ್ಕೃತ ನಟಿ ಜೇನ್‌ ಫೋಂಡಾ ಸೇರಿದಂತೆ 40ಕ್ಕೂ ಅಧಿಕ ಪರಿಸರ ಪರ ಹೋರಾಟಗಾರರನ್ನು ಬಂಧಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

 ಫೋಂಡಾ ಅವರನ್ನು ಶನಿವಾರ 1 ಗಂಟೆಗೆ ಉಚ್ಚ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆನಂತರ ಅವರನ್ನ ಬಿಡುಗಡೆಗೊಳಿಸಲಾಯಿತು.

 ಪಳೆಯುಳಿಕೆಜನ್ಯ ಇಂಧನ (ಪೆಟ್ರೋಲ್,ಡೀಸೆಲ್)ಗಳ ಬಳಕೆಯನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಿ, ತಾನು ಪ್ರತಿ ಶುಕ್ರವಾರವೂ ಜೈಲಿಗೆ ಹೋಗುವ ಯೋಚನೆಯನ್ನು ಹೊಂದಿರುವುದಾಗಿ ಜೇನ್‌ಫೋಂಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News