ಕರ್ನಾಲ್ ನಲ್ಲಿ ಬೋರ್ ವೆಲ್ ಗೆ ಬಿದ್ದ ಐದರ ಹರೆಯದ ಬಾಲಕಿ

Update: 2019-11-04 04:53 GMT

ಚಂಡೀಗಢ , ನ.4: ಹರ್ಯಾಣದ ಕರ್ನಾಲ್ ಜಿಲ್ಲೆಯ ಹರ್ಸಿಂಗ್‌ಪುರ ಗ್ರಾಮದಲ್ಲಿ 5 ವರ್ಷದ ಬಾಲಕಿ 50 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಘಟನೆ ರವಿವಾರ ನಡೆದಿದೆ. ಬಾಲಕಿಯನ್ನು ಹೊರಗೆಳೆಯಲು  ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಘರೌಂಡಾ ಪ್ರದೇಶದಲ್ಲಿ ಹೊಲದಲ್ಲಿ ಬಾಲಕಿ  ಆಡುತ್ತಿದ್ದಾಗ  ತನ್ನ ಕುಟುಂಬಕ್ಕೆ ಸೇರಿದ ಬೋರ್ ವೆಲ್ ನೊಳಗೆ ಬಿದ್ದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿ ಕಾಣೆಯಾಗಿರುವುದು ಹೆತ್ತವರ ಗಮನಕ್ಕೆ ಬಂದಾಗ ಅವರು ಮಗುವಿಗಾಗಿ  ಹುಡುಕಾಟವನ್ನು ಪ್ರಾರಂಭಿಸಿದರು, ಆದರೆ ನಂತರ ಅವಳು ಬೋರ್ ವೆಲ್ ನೊಳಗೆ ಬಿದ್ದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ನಂತರ, ಎನ್‌ಡಿಆರ್‌ಎಫ್‌ಗೆ ಸಹ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೋರ್‌ವೆಲ್‌ನೊಳಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದ್ದು, ಮತ್ತು ರಕ್ಷಕರು ಕ್ಯಾಮರಾವನ್ನು ಬಳಸಿ ಮಗು ಬೋರ್ ವೆಲ್ ನಲ್ಲಿರುವುದನ್ನು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News