'ರೋಗಿಗೆ ಕಾಂಪೌಂಡರ್ ಚಿಕಿತ್ಸೆ ನೀಡಿದ ಹಾಗಾಯಿತು...'
Update: 2019-11-04 22:49 IST
ಹೊಸದಿಲ್ಲಿ, ನ.4: ಮುಕ್ತ ವ್ಯಾಪಾರ ಒಪ್ಪಂದ ವಿಚಾರವನ್ನು ಮೋದಿ ಸರಕಾರ ನಿಭಾಯಿಸಿದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್, 'ಇದು ವೈದ್ಯರಿಲ್ಲದೆ ಇದ್ದಾಗ ಕಾಂಪೌಂಡರ್ ರೋಗಿಗೆ ಚಿಕಿತ್ಸೆ ನೀಡಿದ ಹಾಗಾಯಿತು' ಎಂದಿದ್ದಾರೆ.
ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದ ಅವರು, ಆರ್ ಸಿಇಪಿ ಮತ್ತು ಜಿಎಸ್ ಟಿ ಎರಡೂ ಯೋಜನೆಗಳನ್ನು ಕಾಂಗ್ರೆಸ್ ಆರಂಭಿಸಿತ್ತು. ಆದರೆ ಮೋದಿ ಸರಕಾರವು ಕೆಟ್ಟ ರೀತಿಯಲ್ಲಿ ಇವುಗಳನ್ನು ಮುಂದುವರಿಸಿತು ಎಂದರು.