ಪಿಲಿಕುಳ: ಅಂತಾರಾಷ್ಟ್ರೀಯ ಫುಲ್ ಡೋಮ್ ಚಿತ್ರೋತ್ಸವ ತಾರಾಲಯ ಸಮ್ಮೇಳನಕ್ಕೆ ಚಾಲನೆ

Update: 2019-11-06 08:52 GMT

ಮಂಗಳೂರು, ನ.6; ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹ ಕ ಸೊಸೈಟಿ (ಕೆಸ್ಟೆಪ್ಸ್) ಆಶ್ರಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ 3 ದಿನಗಳ ಅಂತಾರಾಷ್ಟ್ರೀಯ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನಕ್ಕೆ ಪಿಲಿಕುಳದಲ್ಲಿ ಬುಧವಾರ ಚಾಲನೆ ದೊರೆಯಿತು. 

ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನಿವೃತ್ತ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಚಾಲನೆ ನೀಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ಕಾರ್ಯದರ್ಶಿ (ತಾಂತ್ರಿಕ) ಹಾಗೂ ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಹೊನ್ನೇಗೌಡ ಮಾತನಾಡಿ, ಪಿಲಿಕುಳದ 18 ಮೀಟರ್ ಡೋಮ್‌ನ ತಾರಾಲಯದ ವಿಶ್ವಖ್ಯಾತಿಯನ್ನು ಪಡೆದಿರುವುದರೊಂದಿಗೆ ಇದೀಗ ಕರ್ನಾಟಕದ ಮೈಸೂರು, ಬಾಗಲಕೋಟೆ, ಧಾರವಾಡಗಳಲ್ಲಿ 10 ಮೀಟರ್ ಡೋಮ್‌ನ ತಾರಾಲಯಗಳ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ. ಗದಗ, ರಾಯಚೂರು, ಧಾರವಾಡಗಳಲ್ಲಿ ಇಂತಹ ತಾರಾಲಯಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುಎಸ್‌ಎಯ ಅಡ್ಲರ್ ತಾರಾಲಯದ ನಿರ್ದೇಕ ಡಾ.ಮಾರ್ಕ್ ಸುಬ್ಬರಾವ್, ಅಂತಾರಾಷ್ಟ್ರೀಯ ಮಾರಾಟ ಸಂಸ್ಥೆ ಮೆ.ಇವಾನ್ಸ್ ಅಂಡ್ ಸದರ್‌ಲ್ಯಾಂಡ್‌ನ ನಿರ್ದೇಶಕ ಸ್ಕಾಟ್ ಎ. ನಿಸ್ಕಾಚ್, ಮುಂಬೈಯ ಮೆ. ಇನ್ಫೋ ವಿಶನ್ ಟೆಕ್ನಾಲಜೀಸ್ ಪ್ರೈ.ಲಿ.ನ ಅಭಿಜಿತ್ ಶೇಟ್ಯೆ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಡಾ.ಕೆ.ವಿ. ರಾವ್ ಸ್ವಾಗತಿಸಿದರು.

ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗಾಗಿ ನವೆಂಬರ್ 9 ಮತ್ತು 10ರಂದು ಚಿತ್ರೋತ್ಸವ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿದಿನ ಸುಮಾರು 30 ನಿಮಿಷಗಳ ಒಟ್ಟು 9 ಪ್ರದರ್ಶನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಜಗತ್ತಿನ ವಿವಿಧ ದೇಶಗಳ 3ಡಿ ,2ಡಿ ಚಲನಚಿತ್ರ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಲಿದೆ. Book MyShow ಮೂಲಕ ಪ್ರದರ್ಶನಕ್ಕೆ ಮುಂಗಡವಾಗಿ ಆನ್ ಲೈನ್ ನಲ್ಲಿ ಟಿಕೆಟ್ ಪಡೆಯಬಹುದು. 

ಇನ್ನೋವೇಶನ್ ಟೆಕ್ನಾಲಜೀಸ್ ಮುಂಬೈ ಮತ್ತು ಇವಾನ್ಸ್ ಮತ್ತು ಯುಎಸ್‌ಎಯ ಸದರ್‌ಲ್ಯಾಂಡ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಾಹ್ಯಾಕಾಶ, ಖಗೋಳ ಶಾಸ್ತ್ರ ಸೇರಿದಂತೆ ವಿಜ್ಞಾನದ ಕೌತುಕಗಳ ಕುರಿತಂತೆ ಪ್ರದರ್ಶನವೂ ತಾರಾಲಯದ ಸಮೀಪದ ಸಭಾಂಗಣದಲ್ಲಿ ಆಯೋಜಿಸಲಾಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News