×
Ad

ಕೃಷಿತ್ಯಾಜ್ಯ ವಿಲೇವಾರಿಗೆ ಯಂತ್ರ ಖರೀದಿಗೆ ರೈತರ ನೆರವಿಗೆ ಸಂಸದರಿಗೆ ಅನುಮತಿ ನೀಡಿ

Update: 2019-11-06 21:55 IST

ಚಂಡಿಗಡ,ನ.6: ತಮ್ಮ ಮತಕ್ಷೇತ್ರಗಳಲ್ಲಿ ರೈತರು ಕೃಷಿತ್ಯಾಜ್ಯ ವಿಲೇವಾರಿಗಾಗಿ ಯಂತ್ರವನ್ನು ಖರೀದಿಸಲು ಅವರಿಗೆ ಹಣಕಾಸು ನೆರವನ್ನು ಒದಗಿಸಲು ಸಂಸದರಿಗೆ ಅವಕಾಶ ನೀಡಬೇಕು ಎಂದು ಕೇಂದ್ರ ಆಹಾರ ಸಂಸ್ಕರಣೆ ಸಚಿವೆ ಹರಸಿಮ್ರತ್ ಕೌರ್ ಬಾದಲ್ ಅವರು ಬುಧವಾರ ಲಿಖಿತ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಕೃಷಿತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿಗೊಳಿಸಲು ದುಬಾರಿ ಯಂತ್ರಗಳನ್ನು ಖರೀದಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಉತ್ತರ ಭಾರತದಾದ್ಯಂತ ಕೃಷಿ ತ್ಯಾಜ್ಯಗಳ ಸುಡುವಿಕೆ ಎಗ್ಗಿಲ್ಲದೆ ಮುಂದುವರಿದಿದೆ. ಆದ್ದರಿಂದ ರೈತರು ಕೃಷಿತ್ಯಾಜ್ಯಗಳನ್ನು ಸೂಕ್ತ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿಲೇವಾರಿಗೊಳಿಸಲು ನೆರವಾಗುವ ನಿಟ್ಟಿನಲ್ಲಿ ಸಂಸದರು ಅವರಿಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿನಿಧಿಯಿಂದ ಹಣವನ್ನು ಒದಗಿಸಲು ಅನುಮತಿ ನೀಡಬೇಕು ಎಂದು ಬಾದಲ್ ಪತ್ರದಲ್ಲಿ ತಿಳಿಸಿದ್ದಾರೆ.

ಕೃಷಿತ್ಯಾಜ್ಯಗಳನ್ನು ಸುಡುವುದರಿಂದ ವಾಯು ಮಾಲಿನ್ಯಕ್ಕೆ ಕಾರಣವಾಗುವುದಷ್ಟೇ ಅಲ್ಲ,ಅದು ಮಣ್ಣಿನಲ್ಲಿಯ ಪೋಷಕಾಂಷಗಳನ್ನೂ ಸುಡುವ ಮೂಲಕ ಅದರ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ ಎಂದೂ ಬಾದಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News