ಮುಕ್ತ ಇಂಟರ್‌ನೆಟ್ ಬಳಕೆ: ಪಾಕ್ ಸಾಧನೆ ಕಳಪೆ

Update: 2019-11-06 16:29 GMT

ವಾಶಿಂಗ್ಟನ್, ನ. 6: ಪಾಕಿಸ್ತಾನವು ಸತತ 9ನೇ ವರ್ಷವೂ ‘ಮುಕ್ತ ಇಂಟರ್‌ನೆಟ್ ಬಳಕೆ’ಗೆ ಅವಕಾಶವಿರುವ ದೇಶವಾಗಿ ಗುರುತಿಸಿಕೊಂಡಿಲ್ಲ ಎಂದು ಮುಕ್ತ ಇಂಟರ್‌ನೆಟ್ ಬಳಕೆಯನ್ನು ಪ್ರತಿಪಾದಿಸುವ ಅಂತರ್‌ರಾಷ್ಟ್ರೀಯ ಸಂಘಟನೆ ‘ದ ಫ್ರೀಡಂ ಹೌಸ್’ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.

2019ರಲ್ಲಿ ಅದು 100ರಲ್ಲಿ 26 ಅಂಕಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಅದು 27 ಅಂಕಗಳನ್ನು ಹೊಂದಿದ್ದು, ಈ ಬಾರಿ ಇನ್ನೂ ಒಂದು ಸ್ಥಾನ ಕೆಳಗಿಳಿದಿದೆ.

ಜಾಗತಿಕವಾಗಿ, ಇಂಟರ್‌ನೆಟ್ ಮತ್ತು ಡಿಜಿಟಲ್ ಮಾಧ್ಯಮ ಸ್ವಾತಂತ್ರದಲ್ಲಿ 10 ಅತಿ ಕಳಪೆ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆ.

ಪ್ರಾದೇಶಿಕ ಮಟ್ಟದ ಕಳಪೆ ದೇಶಗಳ ರ್ಯಾಂಕಿಂಗ್‌ನಲ್ಲಿ, ವಿಯೆಟ್ನಾಮ್ ಮತ್ತು ಚೀನಾ ಬಳಿಕ ಪಾಕಿಸ್ತಾನವು ಮೂರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News