ದೇವೇಂದ್ರ ಫಡ್ನವೀಸ್ ಅಲ್ಲ: ಮಹಾರಾಷ್ಟ್ರ ಸಿಎಂ ಆಗಲಿದ್ದಾರೆಯೇ ಬಿಜೆಪಿಯ ಈ ಹಿರಿಯ ನಾಯಕ?

Update: 2019-11-06 17:30 GMT
Photo: hindustantimes.com

ಮುಂಬೈ, ನ.6: ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವವರ್ಯಾರು ಎನ್ನುವ ಕುತೂಹಲ ಇನ್ನೂ ಮುಂದುವರಿದಿರುವ ನಡುವೆಯೇ ಮಹಾರಾಷ್ಟ್ರದ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಬದಲಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆಸರು ಕೇಳಿಬರುತ್ತಿದೆ.

ಮಂಗಳವಾರದ ದೇವೇಂದ್ರ ಫಡ್ನವೀಸ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನಡುವಿನ ಭೇಟಿ ಈ ಸುದ್ದಿಗೆ ಪುಷ್ಠಿ ನೀಡಿದೆ. ಗಡ್ಕರಿ ನೇತೃತ್ವದ ಸರಕಾರದ ಬಗ್ಗೆ ಭಾಗವತ್ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ theprint.in ವರದಿ ಮಾಡಿದೆ.

ಗಡ್ಕರಿ ಬಗ್ಗೆ ಶಿವಸೇನೆಯೂ ಒಳ್ಳೆಯ ಅಭಿಪ್ರಾಯ ಹೊಂದಿದೆ ಎನ್ನಲಾಗಿದೆ. ಶಿವಸೇನೆ ನಾಯಕ ಬಾಳಾಸಾಹೇಬ್ ಠಾಕ್ರೆಯವರ ಅತ್ಯಾಪ್ತರಲ್ಲೊಬ್ಬರಾಗಿದ್ದ ಗಡ್ಕರಿ, ಬಿಜೆಪಿ-ಶಿವಸೇನೆ ನಡುವೆ ವೈಮನಸ್ಸು ಮೂಡಿದಾಗಲೆಲ್ಲಾ ಸಂಧಾನ ನಡೆಸುತ್ತಿದ್ದ ಪ್ರಮುಖ  ನಾಯಕ.

ಒಂದು ವೇಳೆ ಗಡ್ಕರಿ ಮಹಾರಾಷ್ಟ್ರ ಸಿಎಂ ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ 50:50 ಅಧಿಕಾರ ಹಂಚಿಕೆಯ ಸಾಧ್ಯತೆಯನ್ನು ಶಿವಸೇನೆ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News