ಮೊಬೈಲ್ ಪೋನ್‌ನಿಂದ ಸಾಹಿತ್ಯ ಸಂಸ್ಕೃತಿ ನಾಶ: ರಾಮದಾಸ ಶೆಟ್ಟಿಗಾರ್

Update: 2019-11-07 16:57 GMT

ಶಿರ್ವ, ನ.7: ಕಲಿಯುವ ಹಂಬಲವಿದ್ದವರಿಗೆ ವಯಸ್ಸಿನ ಮಿತಿ ಇಲ್ಲ. ಇಂದಿನ ಪೀಳಿಗೆಯ ಇಂಗ್ಲಿಷ್ ಆಕರ್ಷಣೆಯಿಂದಾಗಿ ಕನ್ನಡದ ಬಗ್ಗೆ ಅಭಿರುಚಿ ಇಲ್ಲವಾಗುತ್ತಿದೆ. ಮೊಬೈಲ್ ಫೋನ್ ಸಂಸ್ಕೃತಿಯಿಂದಾಗಿ ಯುವಜನತೆ ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಪಡುಬೆಳ್ಳೆಯ ನೆಲ್ಲಿಕಟ್ಟೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿ ಯಿಂದ ಗುರುವಾರ ಮೂಡುಬೆಳ್ಳೆಯ ನೆಲ್ಲಿಕಟ್ಟೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ತಿಂಗಳ ಸಂಪದ ಕಾರ್ಯಕ್ರಮದ ‘ಶಾಲೆಯತ್ತ ಸಾಹಿತ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಯ ಬಗ್ಗೆ ಮಾತನಾಡಿದ ಉಡುಪಿ ಪೂರ್ಣಪ್ರಜ್ಞ್ಞ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳಿ, ಕನ್ನಡವೆಂದರೆ ಅದೊಂದು ಭಾಷೆಯಷ್ಟೇ ಅಲ್ಲ. ಅದು ಪ್ರೀತಿ, ಶಕ್ತಿ, ಸಂಸ್ಕಾರ ಸಂಸ್ಕೃತಿಗಳ ಸಾರ. ಕನ್ನಡದ ಸಾಹಿತ್ಯ ಪರಂಪರೆಯ ತಿಳಿವು ದೊರೆತಾಗ ಕನ್ನಡ ಭಾಷೆ ಹೃದಯಕ್ಕೆ ಹತ್ತಿರವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಯು.ಎಲ್ ಭಟ್, ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ಸೂರಾ ಲು ನಾರಾಯಣ ಮಡಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಂಜನಾ ಹೆಬ್ಬಾರ್, ಪ್ರವೀಣ್ ಸ್ವರಚಿತ ಕವನ ವಾಚಿಸಿದರು. ಅನಿರುದ್ಧ್ ಕನ್ನಡ ಒಗಟುಗಳನ್ನು ಪ್ರಸ್ತುತ ಪಡಿಸಿದರು. ಕಾವ್ಯಶ್ರೀ ಕನ್ನಡದ ಕುರಿತ ಹಾಡು ಹಾಡಿದರು. ಕನ್ನಡ ಬಾಷೆಯ ಕುರಿತ ವಿವಿಧ ಸ್ಪರ್ಧೆಗಳಲ್ಲಿ ವಿಚೇತರಿಗೆ ಬಹುಮಾನ ವಿತರಿಸಲಾಯಿತು

ಕಾಪು ತಾಲೂಕು ಕಸಪಾ ಸಮಿತಿ ಸದಸ್ಯ ಹರೀಶ್ ಕಟಪಾಡಿ ಸ್ವಾಗತಿಸಿದರು. ಸಮಿತಿ ಸದಸ್ಯ ಕೃಷ್ಣಕುಮಾರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿರುದ್ದ್ ಬಹುಮಾನಿತರ ಪಟ್ಟಿ ವಾಚಿಸಿದರು. ಕಾಪು ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು. ಉಪನ್ಯಾಸಕಿ ಲೀನಾ ನಾಯ್ಕಾ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News