ಮೊಬೈಲ್ ಅಂಗಡಿಗೆ ನುಗ್ಗಿ 59 ಮೊಬೈಲ್ ಕಳವು

Update: 2019-11-07 17:02 GMT

ಉಡುಪಿ, ನ.7: ನಗರದ ತ್ರಿವೇಣಿ ಜಂಕ್ಷನ್ ಬಳಿಯ ಮೊಬೈಲ್ ಅಂಗಡಿಗೆ ನ.5ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕೊಡವೂರು ಪಡುಕೋಟ ನಿವಾಸಿ ರಾಜೇಶ್ ಮಾಬಿಯಾನ್ ಎಂಬವರ ಪ್ಲೇ ಜೋನ್ ಎಂಬ ಹೆಸರಿನ ಮೊಬೈಲ್ ಅಂಗಡಿಯ ಮೇಲ್ಚಾವಣಿಯ ಮೂಲಕ ಒಳನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ರೆಡ್ಮಿ, ಸ್ಯಾಮ್ಸಾಂಗ್, ವಿವೋ, ಒಪ್ಪೊ ಹಾಗೂ ಲಾವಾ ಕಂಪೆನಿಯ ಸುಮಾರು 7,64,990 ರೂ. ಮೌಲ್ಯದ 59 ಹೊಸ ಮೊಬೈಲ್ ಫೋನ್‌ಗಳನ್ನು ಮತ್ತು 70,000ರೂ. ನಗದು ಹಣವನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 8,34,990ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News