‘ಸಾರ ಕವಚ’ ಅಣುಕು ಕಾರ್ಯಾಚರಣೆ: ಬೋಟಿನಲ್ಲಿ ಬಾಂಬ್ ಸಹಿತ ಆರು ಮಂದಿ ವಶಕ್ಕೆ

Update: 2019-11-07 17:07 GMT

 ಮಲ್ಪೆ, ನ.7: ಮಲ್ಪೆ ಮೀನುಗಾರಿಕಾ ಬಂದರಿನ ಬಳಿ ನ.6ರಂದು ಸಂಜೆ 7:30ರ ಸುಮಾರಿಗೆ ಬೋಟಿನಲ್ಲಿ ಬಾಂಬ್ ಸಹಿತ ಆರು ಮಂದಿಯನ್ನು ಬಂಧಿಸುವಲ್ಲಿ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸರು ಯಶಸ್ವಿಯಾಗಿ ದ್ದಾರೆ.

ಇದು ಭಯೋತ್ಪಾದನಾ ಕೃತ್ಯದ ಕುರಿತು ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯ ವತಿಯಿಂದ ಜಿಲ್ಲೆಯ ಕರಾವಳಿ ತೀರ ಪ್ರದೇಶವಾದ ಹೆಜಮಾಡಿಯಿಂದ ಶಿರೂರು ತನಕ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಸಾಗರ ಕವಚ’ ಎಂಬ ಅಣುಕು ಕಾರ್ಯಾಚರಣೆ ಯಾಗಿದೆ.

ಮಲ್ಪೆ ಬಾಪುತೋಟ ಜಟ್ಟಿ ಬಳಿ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವ ಹಿಸುತ್ತಿದ್ದಾಗ ಬಾಪುತೋಟ ಸೇತುವೆ ಬಳಿಯಿದ ಮಲ್ಪೆ ಅಳಿವೆಬಾಗಿಲನ ಕಡೆಗೆ ಸಂಶಯಾಸ್ಪದವಾಗಿ ಬೋಟೊಂದು ಹೋಗುತ್ತಿದ್ದು, ಇದರಲ್ಲಿ ಇದ್ದವರು ಮೀನುಗಾರರಂತೆ ಕಂಡುಬಾರದ ಕಾರಣ ಪೊಲೀಸರು ಪವನಪುತ್ರ ಮೀನು ಗಾರಿಕಾ ಬೋಟನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು.

ಇದರಲ್ಲಿ ಆರು ಮಂದಿ ಅಪರಿಚಿತ ವ್ಯಕ್ತಿಗಳು ಕಂಡು ಬಂದಿದ್ದು, ಅವರನ್ನು ವಿಚಾರಿಸಿದಾಗ ಅವರಲ್ಲಿದ್ದ ಬ್ಯಾಗ್‌ನಲ್ಲಿ ಬಾಂಬ್ ಎಂಬುದಾಗಿ ಬರೆಯಲಾದ ನಾಲ್ಕು ಪೇಪರ್ ಬಾಕ್ಸ್ ಪತ್ತೆಯಾಗಿದೆ. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಇವರೆಲ್ಲರು ರೆಡ್‌ಪೋರ್ಸ್ ತಂಡದವರು ಎಂದು ತಿಳಿದುಬಂದಿದೆ. ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News