ಸಾಗರ ರಕ್ಷಾ ಕವಚ ಅಣಕು ಕಾರ್ಯಾಚರಣೆ ಸಮಾಪ್ತಿ

Update: 2019-11-07 17:31 GMT

ಮಂಗಳೂರು, ನ.7: ನೌಕಾದಳ, ಕೋಸ್ಟ್‌ಗಾರ್ಡ್ ಹಾಗೂ ರಾಜ್ಯ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆದ ಸಾಗರ ರಕ್ಷಾ ಕವಚ ಅಣಕು ಕಾರ್ಯಾಚರಣೆ ಗುರುವಾರ ಸಮಾಪನಗೊಂಡಿದೆ.

ಬುಧವಾರ ಬೆಳಗ್ಗೆ 6ರಿಂದ ಆರಂಭಗೊಂಡ ಕಾರ್ಯಾಚರಣೆ ಗುರುವಾರ ಸಂಜೆ 6ರವರೆಗೆ ನಡೆದಿದ್ದು, ನಗರದ ಮಾಲ್, ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನ ಸಂದಣಿ ಪ್ರದೇಶ, ಬಂದರು, ಕಡಲ ತೀರ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ತನಿಖೆ ನಡೆಸಿದರು.
ಗುರುವಾರ ಪಾಂಡೇಶ್ವರ ಪೊಲೀಸರು ಮಧ್ಯಾಹ್ನ 11:30ಕ್ಕೆ ಜಿಲ್ಲಾಧಿಕಾರಿ ಕಚೇರಿ, ಖಾಸಗಿ ಹೊಟೇಲ್ ಎದುರು ತಿರುಗಾಡುತ್ತಿದ್ದ ರೆಡ್‌ೆರ್ಸ್ ಟೀಮ್‌ನ 6ರಿಂದ 8ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.

ಮುಂಬೈ ಬಾಂಬ್ ಸ್ಫೋಟ ಬಳಿಕ ಪ್ರತಿ ವರ್ಷಕ್ಕೆ ಈ ರೀತಿಯ ಅಣಕು ಕಾರ್ಯಾಚರಣೆ ನಡೆಯುತ್ತಿದ್ದು, ಕೇವಲ ಸಾಂಕೇತಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News