ಈ ದಿನಾಂಕದಿಂದ ಎಸ್‌ಬಿ ಖಾತೆಗಳಿಂದ ನೆಫ್ಟ್ ಸೇವೆ ಉಚಿತ: ಆರ್‌ಬಿಐ ಆದೇಶ

Update: 2019-11-08 17:41 GMT

ಹೊಸದಿಲ್ಲಿ,ನ.8: ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ರಾಷ್ಟ್ರೀಯ ವಿದ್ಯುನ್ಮಾನ ಹಣ ವರ್ಗಾವಣೆ (ನೆಫ್ಟ್) ವ್ಯವಸ್ಥೆಯಡಿ ನಡೆಸುವ ಆನ್‌ಲೈನ್ ವಹಿವಾಟುಗಳಿಗೆ ಜನವರಿ, 2020ರಿಂದ ಶುಲ್ಕಗಳನ್ನು ವಿಧಿಸದಂತೆ ಆರ್‌ಬಿಐ ಶುಕ್ರವಾರ ಬ್ಯಾಂಕುಗಳಿಗೆ ಆದೇಶಿಸಿದೆ.

ನೆಫ್ಟ್ ಮತ್ತು ಆರ್‌ಟಿಜಿಎಸ್ ವಹಿವಾಟುಗಳ ಮೇಲಿನ ಶುಲ್ಕಗಳನ್ನು ರದ್ದುಗೊಳಿಸಿರುವುದಾಗಿ ಆರ್‌ಬಿಐ ಈ ಹಿಂದೆ ತಿಳಿಸಿತ್ತು.

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಆರ್‌ಟಿಜಿಎಸ್ ಮತ್ತು ನೆಫ್ಟ್ ವ್ಯವಸ್ಥೆಗಳಡಿ ನಡೆಸುವ ವಹಿವಾಟುಗಳಿಗೆ ಆರ್‌ಬಿಐ ವಿಧಿಸುತ್ತಿದ್ದ ಶುಲ್ಕಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಬ್ಯಾಂಕುಗಳು ಈ ಲಾಭಗಳನ್ನು ತಮ್ಮ ಗ್ರಾಹಕರಿಗೆ ವರ್ಗಾಯಿಸಬೇಕಿದೆ. ಒಂದು ವಾರದಲ್ಲಿ ಈ ಸಂಬಂಧ ಸೂಚನೆಗಳನ್ನು ಬ್ಯಾಂಕುಗಳಿಗೆ ನೀಡಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News