ಅಮೆಮ್ಮಾರ್ ನಲ್ಲಿ ಮೀಲಾದುನ್ನಬಿ ಆಚರಣೆ

Update: 2019-11-10 04:15 GMT

ಫರಂಗಿಪೇಟೆ, ನ.10: ಅಮೆಮಾರ್ ಬದ್ರಿಯಾ ಮದ್ರಸ ಮತ್ತು ಬದ್ರಿಯಾ ಜುಮಾ ಮಸೀದಿಯ ವತಿಯಿಂದ ರವಿವಾರ ಬೆಳಗ್ಗೆ ಮೀಲಾದುನ್ನಬಿ ಆಚರಿಸಲಾಯಿತು, 

ಮಸೀದಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ. ದ್ವಜಾರೋಹಣಗೈದು ಮೀಲಾದ್ ರ್ಯಾಲಿಗೆ ಚಾಲನೆ ನೀಡಿದರು.

ಮಸೀದಿಯ ಖತೀಬ್ ಅಬ್ದುಲ್ಲತೀಫ್ ಹನೀಫಿ ದುಆಗೈದು ಸಂದೇಶ ನೀಡಿದರು,  ಸದರ್ ಉಸ್ತಾದ್ ಮೊಹಿದ್ದೀನ್ ಅಲ್ ಹಸನಿ,  ಸಿರಾಜುದ್ದೀನ್ ಮದನಿ, ಶಬೀರ್ ಉಸ್ತಾದ್, ಇಸ್ಮಾಯೀಲ್ ಯಮಾನಿ ತಿಂಗಳಾಡಿ, ಅಬೂಬಕರ್ ಮದನಿ, ಉಸ್ಮಾನ್ ಹನೀಫಿ, ಕಮರುದ್ದೀನ್ ಮೌಲವಿ, ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಕೋಶಾಧಿಕಾರಿ ಮುಸ್ತಫ, ಸದಸ್ಯರಾದ ಹಮೀದ್, ಅಬ್ದುರ್ರಝಾಕ್, ಸುಲೈಮಾನ್ ಉಸ್ತಾದ್, ಇಬ್ರಾಹೀಂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News