ನ.17ರಂದು ಫಾಲ್ಕನ್‌ನ ಆಲ್ ಇಂಡಿಯಾ ಟ್ಯಾಲೆಂಟ್ ಹಂಟ್ ಎಕ್ಸಾಮ್

Update: 2019-11-11 12:22 GMT

ಮಂಗಳೂರು: ಶಾಹೀನ್ಸ್ ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಆಲ್ ಇಂಡಿಯಾ ಟ್ಯಾಲೆಂಟ್ ಹಂಟ್ ಎಕ್ಸಾಮ್ (ಫೇತ್2020) ನ.17ರಂದು ಬೆಂಗಳೂರು, ಮಂಗಳೂರು, ಶಿರಸಿ, ಆಂಬೂರ್, ಭಟ್ಕಳ, ಚಿಕ್ಕಮಗಳೂರು, ಹೊಸಪೇಟೆ, ಶಿವಮೊಗ್ಗ ಇತ್ಯಾದಿ ಕಡೆಗಳಲ್ಲಿರುವ ಫೇತ್ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪ್ರದರ್ಶಿಸುವ 600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎರಡು ಕೋ.ರೂ.ಗಳ ವಿದ್ಯಾರ್ಥಿವೇತನಗಳನ್ನು ವಿತರಿಸಲಾಗುವುದು.

ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು www.falconinstitutions.org ನಲ್ಲಿ ಆನ್‌ಲೈನ್ ನೋಂದಣಿಯನ್ನು ಮಾಡುವುದು ಅಗತ್ಯವಾಗಿದೆ. ನೋಂದಣಿಯ ಬಳಿಕ ವಿದ್ಯಾರ್ಥಿಗಳಿಗರ ಪರೀಕ್ಷೆಗೆ ಹಾಜರಾಗಲು ಫೇತ್ ಕೇಂದ್ರಗಳನ್ನು ನಿಗದಿಗೊಳಿಸಲಾಗುವುದು.

ನ.17ರಂದು ಎನ್‌ಟಿಎಸ್‌ಇ ಪರೀಕ್ಷಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದ್ದು,ಅವರು 2019,ಡಿ.1ರಂದು ಫೇತ್ 2020ಕ್ಕೆ ಹಾಜರಾಗಬಹುದು. ಲಿಖಿತ ಪರೀಕ್ಷಯ ಬಳಿಕ ವಿದ್ಯಾರ್ಥಿಗಳಿಗೆ ದೂರವಾಣಿ ಸಂದರ್ಶನ ಮತ್ತು ವೈಯಕ್ತಿಕ ಸಮಾಲೋಚನೆ ನಡೆಸಲಾಗುವುದು.

 ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿರುವ ಫಾಲ್ಕನ್ ಸುಮಾರು30 ಸಂಸ್ಥೆಗಳನ್ನು ನಡೆಸುತ್ತಿದ್ದು, 25 ವರ್ಷಗಳಿಗೂ ಅಧಿಕ ಅನುಭವವನ್ನು ಹೊಂದಿದೆ. ತನ್ನ ಗುಣಮಟ್ಟದ ಪಿಯು ಶಿಕ್ಷಣದ ಮೂಲಕ 1000ಕ್ಕೂ ಅಧಿಕ ವೈದ್ಯರು,10,000ಕ್ಕೂ ಅಧಿಕ ಇಂಜಿನಿಯರ್‌ಗಳು ಮತ್ತು ಇತರ ವೃತ್ತಿಪರರು ಹೊರಹೊಮ್ಮಲು ಅದು ನೆರವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜ್, ಹಂಪನಕಟ್ಟಾ,ರೂಪಾ ಹೋಟೆಲ್ ಎದುರುಗಡೆ,ಮಂಗಳೂರು (1800 313 0204) ಇಲ್ಲಿಗೆ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News