​ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸನ್ಮಾನ

Update: 2019-11-11 16:46 GMT

ಮಂಗಳೂರು, ನ.11: ಪ್ರವಾದಿ ಮುಹಮ್ಮದ್ (ಸ.)ರವರ ಜನ್ಮ ದಿನಾಚರಣೆಯ ಅಂಗವಾಗಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಊರಿನ ಹಿರಿಯ ಸಮಾಜ ಸೇವಕ ಸುಲೈಮಾನ್ ಆಕಿರೆ ಅವರನ್ನು ಕೆಮ್ಮಾರದ ಮೊಹಿಯ್ಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೆಮ್ಮಾರ ಜುಮಾ ಮಸ್ಜಿದ್‌ನ ಅಧ್ಯಕ್ಷ ಇಸ್ಮಾಯೀಲ್ ಕೆಮ್ಮಾರ, ಖತೀಬ್ ಇಲ್ಯಾಸ್ ಸಖಾಫಿ, ಮೋನು ಹಾಜಿ ಕೆಮ್ಮಾರ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಝೀಝ್ ಬಿ.ಕೆ, ರಶೀದ್ ಹಾಜಿ ಬಡ್ಡಮೆ ಮತ್ತಿತರರು ಉಪಸ್ಥಿತರಿದ್ದರು.

ಇಸ್ಮಾಯೀಲ್-ಆಯಿಶಮ್ಮ ದಂಪತಿಯ ಪುತ್ರನಾಗಿ 1946ರಲ್ಲಿ ಜನಿಸಿದ ಸುಲೈಮಾನ್ ಆಕಿರೆ ತನ್ನ 17ನೇ ವಯಸ್ಸಿನಲ್ಲಿ ಕಬರ್ ಅಗೆಯುವ ಸೇವೆಯನ್ನು ಆರಂಭಿಸಿದರು. ಬಡ್ಡಮೆ ಕಾದ್ರಿಯಾಕ ಅವರಿಂದ ಕಬರ್ ಅಗೆಯುವುದನ್ನು ಕಲಿತ ಇವರು ಈವರೆಗೆ ಸುಮಾರು 4,000ಕ್ಕಿಂತಲೂ ಹೆಚ್ಚು ಕಬರನ್ನು ಅಗೆದು ದಫನ ಕಾರ್ಯದಲ್ಲಿ ತೊಡಗಿದ್ದಾರೆ. ಕೆಮ್ಮಾರವಲ್ಲದೆ ಉಪ್ಪಿನಂಗಡಿ, ವಳಾಲ್, ಕೋಲ್ಪೆ, ಆತೂರು, ಗಂಡಿಬಾಗಿಲು ಮತ್ತಿತರ ಕಡೆ ಇವರ ಸೇವೆ ಮುಂದುವರಿದಿದೆ.

ಕೆಮ್ಮಾರ ಮದ್ರಸ ನಿರ್ಮಾಣದ ವೇಳೆ 500ಕ್ಕೂ ಅಧಿಕ ಕಬರನ್ನು ಸ್ಥಳಾಂತರ ಮಾಡಿದ್ದಾರೆ. ಸತತ ಎಂಟು ದಿನಗಳ ಕಾಲ ಕಬರ್ ಅಗೆದ ಇತಿಹಾಸವೂ ಇದೆ. ಕೇವಲ ಒಬ್ಬರ ಸಹಾಯದಿಂದ ಕಬರ್ ಅಗೆದದ್ದೂ ಇದೆ. 30ಕ್ಕಿಂತಲೂ ಹೆಚ್ಚು ಮಂದಿಗೆ ಕಬರ್ ಅಗೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 35 ವರ್ಷದಿಂದ ಕೆಮ್ಮಾರ ಮಸ್ಜಿದ್‌ನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಅಡುಗೆ ಕೆಲಸ ಮಾಡಿದ ಖ್ಯಾತಿಯೂ ಇದೆ. ಇವರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News