ಮಲ್ಪೆ ಬೀಚ್‌ನಲ್ಲಿ ಮುಳುಗಿ ಬಾಲಕ ಮೃತ್ಯು

Update: 2019-11-11 17:02 GMT

ಮಲ್ಪೆ, ನ.11: ಮಲ್ಪೆ ಬೀಚ್‌ನಲ್ಲಿ ಆಡುತ್ತಿದ್ದ ಬಾಲಕನೊಬ್ಬ ತೆರೆಯ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬ್ರಹ್ಮಾವರ ನಾಲ್ಕೂರು ಗ್ರಾಮದ ಅರಮನೆಜೆಡ್ಡು ಕಜ್ಕೆಯ ತಿಮ್ಮಪ್ಪ ನಾಯ್ಕೆ ಎಂಬವರ ಮಗ ಪ್ರತೀಕ್ಷ್(14) ಎಂದು ಗುರುತಿಸಲಾಗಿದೆ.

ಈತ ನ.10ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ತನ್ನ ತಾಯಿ, ಅಕ್ಕ ಮತ್ತು ಇತರ ರೊಂದಿಗೆ ಮಲ್ಪೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದು, ಅಲ್ಲಿ ಸಮುದ್ರದ ನೀರಿನಲ್ಲಿ ಆಟ ಆಡುತ್ತಿರುವಾಗ ಸಮುದ್ರದ ತೆರೆಯ ಅಬ್ಬರಕ್ಕೆ ಸಿಲುಕಿ ಪ್ರತೀಕ್ಷ್ ನೀರಿನಲ್ಲಿ ನಾಪತ್ತೆಯಾಗಿದ್ದನು.

ಈ ಬಗ್ಗೆ ಹುಡುಕಾಟ ನಡೆಸಿದರೂ ಪ್ರತೀಕ್ಷ್ ಪತ್ತೆಯಾಗಿರಲಿಲ್ಲ. ನ.11 ರಂದು ಮಧ್ಯಾಹ್ನ 1:30ರ ಸುಮಾರಿಗೆ ಬಡಾನಿಡಿಯೂರು ಸಮುದ್ರದ ಕಿನಾರೆಯಲ್ಲಿ ಪ್ರತೀಕ್ಷ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News