ಮರಳು, ಮರಳು ಸಾಗಾಟ ಮಾಡುವ ವಾಹನಗಳಿಗೆ ದರ ನಿಗದಿ

Update: 2019-11-11 17:39 GMT

ಉಡುಪಿ, ನ.11:ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದೀಗ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಮರಳಿನ ಹಾಗೂ ಸಾಗಾಟ ಮಾಡುವ ವಾಹನಗಳಿಗೆ ದರ ನಿಗದಿಪಡಿಸಿದ್ದು, ದರದ ವಿವರಗಳನ್ನು ಸಾರ್ವಜನಿಕರ ಗಮನಕ್ಕೆ ಈಗಾಗಲೇ ತರಲಾಗಿದೆ. ಆದರೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದ ಮಾಲಕರು ಹೆಚ್ಚಿನ ದರದಲ್ಲಿ ಮರಳನ್ನು ಸಾರ್ವಜನಿಕರಿಗೆ ಪೂರೈಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಆದ್ದರಿಂದ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮರಳು ಮಾರಾಟ ಮಾಡುವ ಮರಳು ಪರವಾನಿಗೆ ದಾರರು/ ವಾಹನ ಮಾಲಕರ ವಿವರಗಳನ್ನು ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (ಎಂಡಿಪಿ) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ ಜರಗಿಸಲಾಗುವುದು.

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿರ್ಧರಿಸಿದ/ ನಿಗದಿಪಡಿಸಿದ ಮರಳಿನ ದರ ಹಾಗೂ ಮರಳು ಸಾಗಾಟ ದರ/ ವೆಚ್ಚದ ವಿವರಗಳು ಹೀಗಿದೆ.

ಕರಾವಳಿ ನಿಯಂತ್ರಣ ವಲಯ ಪ್ರದೇಶದ (ಸಿಆರ್‌ಝಡ್ ಪ್ರದೇಶದ ಸ್ವರ್ಣಾ, ಸೀತಾ, ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳಿಂದ ತೆರವು ಗೊಳಿಸಿದ ಮರಳಿನ ದರ ಪ್ರತಿ ಮೆಟ್ರಿಕ್ ಟನ್‌ಗೆ (ಸಾಗಾಟ ಪರವಾನಿಗೆ ಯೊಂದಿಗೆ): 550ರೂ., ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) 5500 ರೂ.

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ (ನಾನ್ ಸಿಆರ್‌ಝಡ್ ಪ್ರದೇಶದ ಕುಂದಾಪುರ ತಾಲೂಕಿನ ಮರಳು ಬ್ಲಾಕ್ ಸಂಖ್ಯೆ: 4ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6ರ ಜಪ್ತಿ-ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್‌ಗೆ (ಸಾಗಾಟ ಪರವಾನಿಗೆಯೊಂದಿಗೆ):650 ರೂ. ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್): 6500 ರೂ.ಗಳು. ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ (ನಾನ್ ಸಿಆರ್‌ಝಡ್ ಪ್ರದೇಶದ ಕುಂದಾಪುರ ತಾಲೂಕಿನ ಮರಳು ಬ್ಲಾಕ್ ಸಂಖ್ಯೆ: 4ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6ರ ಜಪ್ತಿ-ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್‌ಗೆ (ಸಾಗಾಟ ಪರವಾನಿಗೆಯೊಂದಿಗೆ):650 ರೂ. ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್): 6500 ರೂ.ಗಳು. ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ (10 ಮೆ.ಟನ್ ಗೆ): ದೊಡ್ಡ ಲಾರಿಗೆ 3000 ರೂ. (20ಕಿ.ಮೀ.ವರೆಗೆ), ನಂತರದ ಪ್ರತಿ ಕಿ.ಮೀ.ಗೆ 50 ರೂ. ಮಧ್ಯಮಗಾತ್ರದ ವಾಹನಗಳಿಗೆ: 2000 ರೂ. (20 ಕಿ.ಮೀ.ವರೆಗೆ), ನಂತರದ ಪ್ರತಿ ಕಿ.ಮೀ.ಗೆ 40 ರೂ.ಗಳು. ಸಣ್ಣ ವಾಹನಗಳಿಗೆ: 1500 ರೂ. (20 ಕಿ.ಮೀ.ವರೆಗೆ), ನಂತರದ ಪ್ರತಿ ಕಿ.ಮೀ.ಗೆ 35 ರೂ.
ಮೇಲಿನಂತೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಹಿರಿಯ ಭೂವಿಜ್ಞಾನಿ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ದೂರವಾಣಿ ಸಂಖ್ಯೆ:0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802, 1077 (ಟೋಲ್ ಫ್ರೀ).

ಮಹೇಶ ಭೂವಿಜ್ಞಾನಿ: 9632742629, ಡಾ.ಮಹದೇಶ್ವರ ಎಚ್.ಎಸ್. ಭೂವಿಜ್ಞಾನಿ:9483096118, ಗೌತಮ್ ಶಾಸ್ತ್ರಿ ಹೆಚ್. ಭೂವಿಜ್ಞಾನಿ: 9008917890, ಸಂಧ್ಯಾಕುಮಾರಿ ಭೂವಿಜ್ಞಾನಿ: 9901370559, ಹಾಜಿರಾ ಸಜಿನಿ ಎಸ್. ಭೂವಿಜ್ಞಾನಿ:9663836959 ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News