ಉಡುಪಿ: ಯುವತಿ ನಾಪತ್ತೆ

Update: 2019-11-11 17:43 GMT

ಉಡುಪಿ, ನ.11: ಉಡುಪಿ ಬಡಗುಬೆಟ್ಟು ಪಣಿಯಾಡಿಯ ಯುವತಿ ಲತಾ ಜೆ. ನಾಯಕ್ (21) ಎಂಬುವರು ಅ.8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ರ ಬರೆದಿಟ್ಟು ಮನೆಯಿಂದ ಕಾಣೆಯಾಗಿದ್ದಾರೆ.

ಇವರು ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, 157 ಸೆಂ.ಮೀ. ಎತ್ತರವಿದ್ದಾರೆ. ಕನ್ನಡ, ತುಳು ಭಾಷೆ ತಿಳಿದಿರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News