ದೇವಾಲಯಗಳಿಂದ ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ: ಸೀತಾರಾಮ ಶೆಟ್ಟಿ

Update: 2019-11-11 18:52 GMT

ಉಪ್ಪಿನಂಗಡಿ: ದೇವಾಲಯಗಳಿಂದ ಮಾತ್ರ ಸಮಾಜದ ಸಾಮರಸ್ಯ ಮತ್ತು ಒಗ್ಗಟ್ಟು ಸಾಧ್ಯವಾಗಿದ್ದು ದೇವಳದ ಬ್ರಹ್ಮಕಲಶೋತ್ಸವದಲ್ಲಿ ಪ್ರತಿಯೊಬ್ಬರೂ ಏಕೀಭಾವದಿಂದ ಭಾಗವಹಿಸುವ ಮೂಲಕ ನವ ಸಮಾಜವನ್ನು ನಿರ್ಮಿಸಲು ಪಣ ತೊಡಬೇಕು ಎಂದು ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿ ಹೇಳಿದರರು.

ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸದಂಗವಾಗಿ ಉಪ್ಪಿನಂಗಡಿ ವಲಯದ ಭಕ್ತಾದಿಗಳನ್ನು ಆಮಂತ್ರಿಸುವ ಕುರಿತು ಚರ್ಚಿಸಲು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸನ್ನಿಧಿಯಲ್ಲಿ ನಡೆದ ಭಕ್ತಾದಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಊರ ಪರವೂರ ಭಕ್ತಾದಿಗಳು ಭಾಗಿಗಳಾಗಬೇಕು. ದೇವಾಲಯದ ಬ್ರಹ್ಮಕಲಶೋತ್ಸವದಂತಹ ಉತ್ತಮ ಕಾರ್ಯವನ್ನು ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸಮಿತಿಯ ಕೋಶಾಧಿಕಾರಿಗಳಾದ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ,  ಉಪ್ಪಿನಂಗಡಿ ಆಸುಪಾಸಿನ ಪ್ರಮುಖರು ಉಸ್ತುವಾರಿ ವಹಿಸಿ ಪ್ರತಿ ಮನೆಗಳಿಗೆ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯಕ್ಕೆ ನೆರವಾಗಬೇಕೆಂದರು.

ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಹಾಗೂ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ , ಮಾಹಾಲಿಂಗ ಕೆ., ಜಯಂತ ಪರೋಳಿ ಇದರ ಹೊಣೆ ವಹಿಸಿಕೊಂಡರು. 

ವೇದಿಕೆಯಲ್ಲಿ ಶಾಂತಿನಗರ ಮಹಾ ವಿಷ್ಣು ಮೂರ್ತಿ ದೇವಸ್ಥಾನ ಆಡಳಿತ ಮೋಕ್ತೇಸರರಾದ ಯು.ಜಿ. ರಾಧ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಜತೀಂದ್ರ ಶೆಟ್ಟಿ, ಎಂ. ಸದಾಶಿವ ರೈ, ಮುರಳೀಧರ ರೈ ಮಠಂತಬೆಟ್ಟು, ರುಕ್ಮಯ ಪೂಜಾರಿ, ಎಂ. ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ, ರಾಮಚಂದ್ರ ಮಣಿಯಾಣಿ, ದಿಲೀಪ್ ಶೆಟ್ಟಿ ಕರಾಯ, ಬಾಲಕೃಷ್ಣ ಶೆಟ್ಟಿ, ಶಿವಪ್ರಸಾದ್, ಶಿವರಾಮ ಶ್ರೀಧರ್ ಪೂಜಾರಿ, ಸತೀಶ ರೈ, ನವೀನ, ಕೇಶವ ರಂಗಾಜೆ, ಚಂದ್ರಶೇಖರ ರಾಮನಗರ, ಪ್ರಭಾಕರ ಸಾಮಾನಿ, ಕೀರ್ತನ್ ಶೆಟ್ಟಿ,   ರಾಮಣ್ಣ ಗೌಡ, ರಾಜೀವ ಶೆಟ್ಟಿ, ಸದಾಶಿವ ರೈ, ಜಯಪ್ರಕಾಶ್ ಎಂ., ಗಂಗಾಧರ ಶೆಟ್ಟಿ, ಸಂಕಪ್ಪ ಶೆಟ್ಟಿ, ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

ಬೆಳ್ಳಿಪ್ಪಾಡಿ ಪ್ರಕಾಶ್ ರೈ ಸ್ವಾಗತಿಸಿದರು.  ವಿಕ್ರಮ್ ಕೋಡಿಂಬಾಡಿ ವಂದಿಸಿದರು.  ಆದರ್ಶ ಕಜೆಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News