ಇನ್‍ಸಿಗ್ನಿಯಾ-ಯುವಜನೋತ್ಸವ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್

Update: 2019-11-11 18:55 GMT

ಮೂಡುಬಿದಿರೆ: ಧಾರವಾಡದ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇನ್ ಸಿಗ್ನಿಯಾ-ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ 20ನೇ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ಚಾಂಪಿಯನ್ ಪ್ರಶಸ್ತಿ ಪಡೆಯಿತು. 

ವೈಯಕ್ತಿಕ ವಿಭಾಗದ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಆಳ್ವಾಸ್ ಮೆಕ್ಯಾನಿಕಲ್ ವಿಭಾಗದ ವಿಷ್ಣು ವಿನೋದ್ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಐ.ಎಸ್.ಸಿ ವಿಭಾಗ ನಿಖಿಲ್ ಅಚಾರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.

ಜಾನಪದ ಅರ್ಕೆಸ್ಟ್ರಾದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಥಮ, ಏಕಾಂಕ ನಾಟಕದಲ್ಲಿ ಪ್ರಥಮ, ತಂಡ ವಿಭಾಗದ ಡೊಳ್ಳು ಕುಣಿತ, ಮೈಮ್ ಹಾಗೂ ಸ್ಕಿಟ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. 

ಆಳ್ವಾಸ್ ಸಾಂಸ್ಕೃತಿಕ ತಂಡದ ಸಂಯೋಜಕರಾದ ಸ್ವಾತಿ ಸಂಜಯ್, ವಾಸುದೇವ್ ಶಹಪೂರ ಹಾಗೂ ಗಣೇಶ್ ಅಚಾರ್ಯ ಉಪಸ್ಥಿತರಿದ್ದರು.

ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News