ಕಲ್ಲಡ್ಕ : ಟಿಕ್ಕಾ ಪಾಯಿಂಟ್ ನಿಂದ ಮೀಲಾದ್ ಪ್ರಯುಕ್ತ ರಕ್ತದಾನ

Update: 2019-11-12 04:26 GMT

ವಿಟ್ಲ, ನ.12: ಮೀಲಾದುನ್ನಬಿ ಪ್ರಯುಕ್ತ ಕಲ್ಲಡ್ಕದ ಟಿಕ್ಕಾ ಪಾಯಿಂಟ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು  ಕಲ್ಲಡ್ಕ ಬಾಳಿಯೂರು ಸಿಟಿಯ ಮರ್ಹೂಂ ಅಝೀಝ್ ಬಲ್ಲೆಕೋಡಿ ವೇದಿಕೆಯಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿ.ಎಫ್.ಐ. ಕಲ್ಲಡ್ಕ ವಲಯಾದ್ಯಕ್ಷ ಸಿದ್ದೀಕ್ ಪನಾಮ ಮಾತನಾಡಿ, ಕೋಮುಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟ ಕಲ್ಲಡ್ಕವು ಇದೀಗ ಶಾಂತಿ -ಸೌಹಾರ್ದ, ಪ್ರೀತಿ - ವಿಶ್ವಾಸದ ಬದುಕಿನತ್ತ ಮುಂದಡಿ ಇಡುತ್ತಿದೆ. ಇಲ್ಲಿನ ಯುವಕರ ಸಮಾಜಮುಖಿ ಕಾರ್ಯ ಚಟುವಟಿಕೆಗಳು ಹಾಗೂ ಹಿರಿಯರ ಪ್ರೋತ್ಸಾಹ ಇದಕ್ಕೆ ಕಾರಣವಾಗಿದೆ ಎಂದರು.

   ಬಂಟ್ವಾಳ ಎ.ಪಿ.ಎಂ.ಸಿ. ಅದ್ಯಕ್ಷ ಕೆ. ಪದ್ಮನಾಭ ರೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಜೇಂದ್ರ ಎನ್. ಹೊಳ್ಳ, ರಾಜಾ ಮೋನಾಕ, ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯ ಸದಸ್ಯ ಜವಾಝ್ ಜೆ.ಕೆ.,  ಬ್ಲಡ್ ಹೆಲ್ಪ್ ಲೈನ್ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ, ಗೋಳ್ತಮಜಲು ಗ್ರಾಪಂ ಸದಸ್ಯ ಯೂಸುಫ್ ಹೈದರ್, ಅಲಿಪ್ ಟ್ರಾವೆಲ್ಸ್ ನ ಸಫ್ವಾನ್ ಸಾಬಿತ್, ಯುವ ಕಾಂಗ್ರೆಸ್ ಕಲ್ಲಡ್ಕ ವಲಯಾಧ್ಯಕ್ಷ ಸಿದ್ದೀಕ್ ಜಿ.ಎಸ್., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಝಕರಿಯ ಕಲ್ಲಡ್ಕ, ಕಲ್ಲಡ್ಕ ಝಮಾನ್ ಬಾಯ್ಸ್ ಅದ್ಯಕ್ಷ ಮುನಾಝ್ ಮುನ್ನ ಕಲ್ಲಡ್ಕ, ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಝ್, ಕೆ.ಪಿ.ಎಲ್. ಸ್ಥಾಪಕ ನಝೀರ್ ಬಲ್ಲೆಕೋಡಿ, ಹಿರಿಯ ಕಬಡ್ಡಿ ಆಟಗಾರ ಜಿ.ಎ.ಫಾರೂಕ್ ಗೋಳ್ತಮಜಲು, ಉದ್ಯಮಿಗಳಾದ ರಫೀಕ್ ಎಸ್.ಆರ್., ಸಜ್ಜಾದ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ನಿರ್ವಾಹಕ ಸೂರಜ್ ಮನ್ಸೂರ್ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.

    ಟಿಕ್ಕಾ ಪಾಯಿಂಟ್ ಗೌರವಾಧ್ಯಕ್ಷ ಅಶ್ರಫ್ ಕಲ್ಲಡ್ಕ, ಸಲಹೆಗಾರ ಹಾರಿಸ್ ಅಮರ್, ಅಧ್ಯಕ್ಷ ಅಫ್ರಿದ್ ಮಿಲಾದ್, ಉಪಾಧ್ಯಕ್ಷ ಫಾರೂಕ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ಟಿಕ್ಕಾ ಪಾಯಿಂಟ್ ಸಲಹೆಗಾರ, ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಬ್ಲಡ್ ಹೆಲ್ಫ್ ಲೈನ್ ನಿರ್ವಾಹಕ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

    ಶಿಬಿರದಲ್ಲಿ 100 ಮಂದಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News