ಮಂಗಳೂರು ಮನಪಾ ಚುನಾವಣೆ: ಮಧ್ಯಾಹ್ನ ವರೆಗೆ 39.50 ಶೇ. ಮತದಾನ

Update: 2019-11-12 08:47 GMT

ಮಂಗಳೂರು, ನ.12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ 39.50 ಶೇ. ಮತದಾನವಾಗಿದೆ.

ಇಂದು ಬೆಳಗ್ಗೆ 7ಗಂಟೆಯಿಂದ ಮತದಾನ ನಿಧಾನಗತಿಯಲ್ಲಿ ಆರಂಭಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಶಾಸಕರು, ಮಾಜಿ ಶಾಸಕರು ಬೆಳಗ್ಗೆಯೇ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.
ಮಿಲಾಗ್ರಿಸ್ ಶಾಲೆಯ 40ನೇ ಬೂತ್ ನಲ್ಲಿ 20ಕ್ಕೂ ಅಧಿಕ ಮಂಗಳಮುಖಿಯರು ಮತದಾನ ಮಾಡಿ ಸಂಭ್ರಮಿಸಿದರು.

ಅನಾರೋಗ್ಯಕ್ಕೀಡಾಗಿರುವ ಉದ್ಯಮಿ ಸುಧೀರ್ ಘಾಟೆ ಮೂಗಿನ ಹೊಳ್ಳೆಗಳಿಗೆ ಆಕ್ಸಿಜನ್ ಪೈಪ್ ಅಳವಡಿಸಿಕೊಂಡೇ ಮತದಾನ ಮಾಡಿ ಗಮನಸೆಳೆದರು. ಅನಾರೋಗ್ಯದಿಂದ ಬಳಲುತ್ತಿರುವ ಅವರು ಕೊಡಿಯಲ್ ಬೈಲ್ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News