ಡಾಲರ್ ಎದುರು ರೂಪಾಯಿ ಮೌಲ್ಯ 72ಕ್ಕೆ ಕುಸಿತ: 2019ರಲ್ಲೇ ಅತ್ಯಧಿಕ ಇಳಿಕೆ

Update: 2019-11-13 15:37 GMT
ಫೋಟೋ: economictimes.indiatimes.com

ಹೊಸದಿಲ್ಲಿ,ಆ.23: ಈ ವರ್ಷ ಇದೇ ಮೊದಲ ಬಾರಿಗೆ ಬುಧವಾರ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 72.02ಕ್ಕೆ ಕುಸಿದಿದೆ. ಶೇರುಮಾರುಕಟ್ಟೆಯಲ್ಲಿ ನಿಫ್ಟಿ ಸೂಚ್ಯಂಕವು 11,850ರ ಮಟ್ಟದಲ್ಲಿ ಕೊನೆಗೊಂಡಿರುವುದು ಹಾಗೂ ಚೀನಾದ ಯುವಾನ್ ಕರೆನ್ಸಿ ದುರ್ಬಲಗೊಂಡಿರುವ ನಡುವೆಯೇ ರೂಪಾಯಿ ಮೌಲ್ಯದಲ್ಲಿ ಕುಸಿತವುಂಟಾಗಿದೆ.

  ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಆರಂಭದ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 29 ಪೈಸೆ ಕುಸಿತವುಂಟಾಗಿ 71.75 ಆಗಿತ್ತು. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ಮುಕ್ತಾಯದ ವೇಳೆಗೆ ಡಾಲರ್ ಎದುರು ರೂಪಾಯಿ ವೌಲ್ಯ 71.4 ರೂ.ನಲ್ಲಿ ಸ್ಥಿರಗೊಂಡಿತ್ತು. ಗುರುನಾನಕ್ ಜಯಂತಿಯ ಪ್ರಯುಕ್ತ ರಜೆಯಿದ್ದುದರಿಂದ ನವೆಂಬರ್ 12ರಂದು ಮಂಗಳವಾರ ಕರೆನ್ಸಿ ವಿನಿಮಯ ಕೇಂದ್ರ ಕಾರ್ಯಾಚರಿಸಿರಲಿಲ್ಲ.

 ಕಳೆದ ಕೆಲವು ವಾರಗಳಲ್ಲಿ ಭಾರತದ ಶೇರು ಮಾರುಕಟ್ಟೆ ಚೇತರಿಸಿಕೊಂಡಿದೆಯಾದರೂ, ಚೀನಾ-ಅಮೆರಿಕ ವಾಣಿಜ್ಯ ಸಮರ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವಿದ್ಯಮಾನಗಳು ರೂಪಾಯಿ ವೌಲ್ಯ ಹೆಚ್ಚಳಕ್ಕೆ ಅಡ್ಡಲಾಗಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಚೀನಾ ಹಾಗೂ ಅಮೆರಿಕ ನಡುವೆ ವಾಣಿಜ್ಯ ಬಿಕ್ಕಟ್ಟು ಬಿಗಡಾಯಿಸಿರುವುದರಿಂದ ಚೀನಾದ ಕರೆನ್ಸಿ ಯುವಾನ್ ದುರ್ಬಲಗೊಂಡಿದೆ. ಉಭಯದೇಶಗಳ ವಾಣಿಜ್ಯ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆಯಿರುವುದರಿಂದ, ಈಗಾಗಲೇ ತಲೆದೋರಿರುವ ಜಾಗತಿಕ ಆರ್ಥಿಕ ಹಿಂಜರಿತವನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News