ಪಂಜಿಕಲ್ಲು ಗ್ರಾಪಂ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಸುರೇಶ್ ಪೂಜಾರಿ ಗೆಲುವು

Update: 2019-11-14 06:18 GMT

ಬಂಟ್ವಾಳ, ನ.14: ಪಂಜಿಕಲ್ಲು ಗ್ರಾಮ ಪಂಚಾಯತ್ ಗೆ ತೆರವಾದ ಒಂದು ಸ್ಥಾನಕ್ಕೆ ನ.12ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಗೆಲುವು ಸಾಧಿಸಿದ್ದಾರೆ.

ಒಟ್ಟು ಚಲಾವಣೆಯಾದ ಮತಗಳು: 776, ಕಾಂಗ್ರೆಸ್ ಬೆಂಬಲಿತ ಸುರೇಶ್ ಜೆ ಪೂಜಾರಿ 405 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಡಿ. ಪ್ರವೀಣ್ 361 ಮತಗಳನ್ನು ಗಳಿಸಿದ್ದರು. 10 ಮತಗಳು ತಿರಸ್ಕ್ರತಗೊಂಡಿವೆ.

ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಗುರುವಾರ ಬೆಳಗ್ಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಚುನಾವಣಾ ಪ್ರಭಾರ  ಉಪತಹಶೀಲ್ದಾರ್ ಸೀತಾರಾಮ,  ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ವಿದ್ಯಾ ಜೆ ಮೋರೆ, ಶ್ವೇತ ಚುಣಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದು, ಎಣಿಕೆ ಕಾರ್ಯದಲ್ಲಿ ನೇರವಾದರು. ಕಿರಣ್, ಥೋಮಸ್, ಚಂದು ಸಹಕರಿಸಿದರು.

ವಾರ್ಡಿನ  ಉಪಚುನಾವಣೆಯಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಅವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸುದರ್ಶನ್ ಜೈನ್, ಗಂಗಾಧರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News