ಮಂಗಳೂರು ಮನಪಾ ಚುನಾವಣೆ: ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಬಿಜೆಪಿ

Update: 2019-11-14 05:17 GMT

ಮಂಗಳೂರು, ನ.14: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, 60 ವಾರ್ಡ್ ಗಳಲ್ಲಿ ಪ್ರಕಟವಾಗಿರುವ ಫಲಿತಾಂಶದಲ್ಲಿ 20ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದೆ. ಕಾಂಗ್ರೆಸ್ ಕೇವಲ 9 ವಾರ್ಡ್ ಗಳಲ್ಲಿ ಮಾತ್ರ ಜಯಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ.

 ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ.

ವಾರ್ಡ್ ನಂ.53 ಬಜಾಲ್: ಕಾಂಗ್ರೆಸ್ ನ ಅಶ್ರಫ್ ಬಜಾಲ್ 1,660 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ.

ವಾರ್ಡ್ ನಂ.22 ಕದ್ರಿ ಪದವು: ಬಿಜೆಪಿಯ ಜಯಾನಂದ ಅಂಚನ್ ರಿಗೆ ಜಯ

ವಾರ್ಡ್ ನಂ.12 ಪಂಜಿಮೊಗರು: ಕಾಂಗ್ರೆಸ್ ನ ಅನಿಲ್ ಕುಮಾರ್ ಗೆ ಗೆಲುವು

ವಾರ್ಡ್ ನಂ.18 ಕಾವೂರು: ಬಿಜೆಪಿಯ ಗಾಯತ್ರಿ ಎ. ಅವರು 3296 ಮತಗಳನ್ನು ಗಳಿಸಿ ವಿಜಯಿಯಾಗಿದ್ದಾರೆ.

 ವಾರ್ಡ್ ನಂ.38 ಬೆಂದೂರ್: ಕಾಂಗ್ರೆಸ್ ನ ನವೀನ್ ಆರ್. ಡಿಸೋಜ 1598 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂ.39: ಕಾಂಗ್ರೆಸ್ಸಿನ ಜೆಸಿಂತಾ ಆಲ್ಫ್ರೆಡ್ 1092 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

 ವಾರ್ಡ್ ನಂ.44: ಬಂದರ್: ಝೀನತ್ ಸಂಶುದ್ದೀನ್ 1308 ಮತಗಳನ್ನು ಗಳಿಸಿ ಜಯಬೇರಿ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News