ಮನಪಾ ಚುನಾವಣೆ: ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐಗೆ ಜಯ

Update: 2019-11-14 15:55 GMT

ಮಂಗಳೂರು, ನ.14: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ.5 ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಶಂಶಾದ್ ಅಬೂಬಕರ್ ಅವರು 2766 ಮತಗಳನ್ನು ಪಡೆದು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಾಗಿದ್ದ ಮಾಜಿ ಮೇಯರ್ ಮೇಯರ್ ಗುಲ್ಝಾರ್ ಬಾನು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಉಮರಬ್ಬ ಅವರ ಪುತ್ರಿ ಫಾತಿಮಾ ಬಿ. ಅವರು ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News