ಮಂಗಳೂರು ಮನಪಾ ಚುನಾವಣೆ: ಅಧಿಕಾರದತ್ತ ಬಿಜೆಪಿ ದಾಪುಗಾಲು

Update: 2019-11-14 06:51 GMT

ಮಂಗಳೂರು, ನ.14: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಬಹುಮತದತ್ತ ದಾಪುಗಾಲಿಡುತ್ತಿದೆ. ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 60  ವಾರ್ಡ್ ಗಳ ಪೈಕಿ 47 ವಾರ್ಡ್ ಗಳ ಫಲಿತಾಂಶ ಘೋಷಣೆಯಾಗಿದ್ದು, 34ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 11ರಲ್ಲಷ್ಟೇ ಕಾಂಗ್ರೆಸ್ ಜಯಿಸಿದೆ. 2 ವಾರ್ಡ್ ಗಳಲ್ಲಿ  ಎಸ್ ಡಿಪಿಐ ಗೆಲುವು ಸಾಧಿಸಿದೆ.

ಈ ನಡುವೆ ವಿಜೇತ ಅಭ್ಯರ್ಥಿಗಳು ಬೆಂಬಲಿಗರು, ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ  ವಿಜಯೋತ್ಸವ ಆಚರಿಸುತ್ತಿದ್ದಾರೆ. ಮತಗಟ್ಟೆ ಸುತ್ತಮುತ್ತ ಗೆದ್ದ ಪಕ್ಷಗಳು ಬಾವುಟಗಳು ರಾರಾಜಿಸುತ್ತಿವೆ.

19ನೇ ವಾರ್ಡ್ ಪಚ್ಚನಾಡಿ: ಬಿಜೆಪಿ ಅಭ್ಯರ್ಥಿ ಸಂಗೀತಾ ಆರ್.ನಾಯಕ್ ಗೆಲುವು ಸಾಧಿಸಿದ್ದಾರೆ.

 14ನೇ ವಾರ್ಡ್ ಮರಕಡ: ಬಿಜೆಪಿ ಅಭ್ಯರ್ಥಿ ಲೋಹಿತ್ ಅಮೀನ್ ಜಯಬೇರಿ ಬಾರಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮೇಯರ್ ಹರಿನಾಥ್ ಸೋತಿದ್ದಾರೆ.

49ನೇ ವಾರ್ಡ್ ಕಂಕನಾಡಿ: ಕಾಂಗ್ರೆಸ್ಸಿನ ಪ್ರವೀಣ್ ಚಂದ್ರ ಆಳ್ವ ಗೆಲುವು ಸಾಧಿಸಿದ್ದಾರೆ.

9ನೇ ವಾರ್ಡ್ ಕುಳಾಯಿ: ಬಿಜೆಪಿಯ ಜಾನಕಿ ಯಾನೆ ವೇದಾವತಿ 3,140 ಮತಗಳಿಂದ  ಗೆಲುವು ಸಾಧಿಸಿದ್ದಾರೆ.

10ನೇ ವಾರ್ಡ್ ಬೈಕಂಪಾಡಿ: ಮಾಜಿ ಉಪಮೇಯರ್, ಬಿಜೆಪಿ ಅಭ್ಯರ್ಥಿ ಸುಮಿತ್ರಾ  2,002 ಮತಗಳನ್ನು ಪಡೆದು ಜಯಿಸಿದ್ದಾರೆ.

55ನೇ  ವಾರ್ಡ್ ಅತ್ತಾವರ:  ಬಿಜೆಪಿ ಅಭ್ಯರ್ಥಿ ಶೈಲೇಶ್ 1,854 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

 15ನೇ ವಾರ್ಡ್ ಕುಂಜತ್ತಬೈಲ್: ಬಿಜೆಪಿ ಅಭ್ಯರ್ಥಿ ಸುಮಂಗಲಾರಿಗೆ ಗೆಲುವು ಸಾಧಿಸಿದ್ದಾರೆ.

40ನೇ ಕೋರ್ಟ್ ವಾರ್ಡ್: ಕಾಂಗ್ರೆಸ್ ನ ಎ.ಸಿ.ವಿನಯರಾಜ್ 1,135 ಮತಗಳನ್ನು ಪಡೆದು ಜಯಿಸಿದ್ದಾರೆ.

10ನೇ ಬೈಕಂಪಾಡಿ ವಾರ್ಡ್: ಬಿಜೆಪಿ ಅಭ್ಯರ್ಥಿ ಸುಮಿತ್ರಾರಿಗೆ ಗೆಲುವು ಸಾಧಿಸಿದ್ದಾರೆ.

 30ನೇ ಕೊಡಿಯಾಲ್ ಬೈಲ್ ವಾರ್ಡ್: ಬಿಜೆಪಿ ಅಭ್ಯರ್ಥಿ ಸುಧೀರ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ

  23ನೇ ದೇರೆಬೈಲ್ ಪೂರ್ವ ವಾರ್ಡ್: ಬಿಜೆಪಿ ಅಭ್ಯರ್ಥಿ ರಂಜಿನಿ ಕೋಟ್ಯಾನ್ ಗೆಲುವು ಸಾಧಿಸಿದ್ದಾರೆ

11ನೇ ಪಣಂಬೂರು ಬೆಂಗ್ರೆ ವಾರ್ಡ್: ಬಿಜೆಪಿ ಅಭ್ಯರ್ಥಿ ಸುನೀತಾ ಗೆಲುವು ಸಾಧಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News