ಫಜೀರು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Update: 2019-11-14 11:22 GMT

ಕೊಣಾಜೆ : ಫಜೀರು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಫಜೀರು ಗ್ರಾ.ಪಂ.ಅಧ್ಯಕ್ಷ ಸೀತರಾಂ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ಮಕ್ಕಳ ಬೆಳವಣಿಗೆ ಮತ್ತು ಪೋಷಕರ ಪಾತ್ರದ ಕುರಿತು ವಿವರಿಸಿದರು.

ಫಜೀರು ಗ್ರಾ.ಪಂ. ಗ್ರಾಮಕರಣಿಕ ತೌಫೀಖ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು.
ಮಕ್ಕಳು ಕಲಿಯುವುದಿಲ್ಲ ಅಂದ ಮಾತ್ರಕ್ಕೆ ಹೊಡೆಯುವುದು ಬಡಿಯುವುದು ಸೂಕ್ತವಲ್ಲ. ಮಕ್ಕಳ ಮನವೊಲಿಸಿ ಅ ಮೂಲಕ ಮಕ್ಕಳ ಬೆಳವಣಿಗೆಗೆ ಸಾಥ್ ನೀಡಬೇಕೆಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅನಿವಾಸಿ ಬರಹಗಾರ ಇಸ್ಹಾಕ್ ಸಿ.ಐ‌. ಫಜೀರ್ ಮಕ್ಕಳ ಶಿಕ್ಷಣದ ವಿಷಯಗಳಲ್ಲಿ ಒತ್ತಡ ಹಾಕಬಾರದು, ಅವರು ಅಂಕ ಗಳಿಸುವ ಯಂತ್ರಗಳಲ್ಲ. ಭವಿಷ್ಯದಲ್ಲಿ ಏನಾಗಬೇಕೆಂದು ಅವರು ತೀರ್ಮಾನಿಸಬೇಕೇ ವಿನಃ ಪೋಷಕರು ಒತ್ತಡ ಹಾಕುವುದು ಸರಿಯಲ್ಲ, ಭಾರತ ಕ್ರಿಕೆಟ್ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಜಾವಗಲ್ ಶ್ರೀನಾಥ್, ಹೆತ್ತವರಿಗೆ ಅವರನ್ನು ಇಂಜಿನಿಯರ್ ಮಾಡಬೇಕೆಂದು ಬಯಸಿದ್ದರು ಅದರಂತೆ ಅವರು ಕೂಡ ಇಂಜಿನಿಯರಿಂಗ್ ಕಲಿತಿದ್ದರು ಆದರೆ ಅವರ ಆಯ್ಕೆ ಮಾತ್ರ ಭಾರತದ ಕ್ರಿಕೆಟ್ ತಂಡದಲ್ಲಿ ಆಟವಾಡುವುದಾಗಿತ್ತು ಆದ್ದರಿಂದ ಮಕ್ಕಳನ್ನು ಕಲಿಕೆಯ ವಿಷಯಗಳಲ್ಲಿ ಅವರಷ್ಟಕ್ಕೆ ಬಿಟ್ಟು ಬಿಡಿ ಎಂದ ಅವರು ಮಕ್ಕಳಿಗೆ "ಆಸ್ತಿ ಮಾಡಿಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿಸೋಣ" ಎಂದರು.

ಆಟೋಟ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸಮಾಜಿಕ ಕಾರ್ಯಕರ್ತ ವಿಜೇತ್ ಫಜೀರು, ಅಂಗನವಾಡಿ ಅಧ್ಯಾಪಕಿ ಲಿಲ್ಲಿ ಉಪಸ್ಥಿತಿಯಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಅಧ್ಯಾಪಕಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News