ಇಬ್ಬರು ಸಾಧಕ ಶಿಕ್ಷಕರಿಗೆ ಯೆನೆಪೊಯ ಶಿಕ್ಷಕ ಪ್ರಶಸ್ತಿ ಪ್ರದಾನ

Update: 2019-11-14 11:36 GMT

ಮಂಗಳೂರು, ನ.14: ಯೆನೆಪೊಯ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿವಂಗತ ಯೆನೆಪೊಯ ಮೊಹಿಯುದ್ದೀನ್ ಕುಂಞಿ ಸ್ಮರಣಾರ್ಥ ಸಂಸ್ಥೆಯ ಸಂಸ್ಥಾಪಕರ ದಿನವಾದ ನ.14ರಂದು ನೀಡಲಾಗುವ ಪ್ರಸಕ್ತ ಸಾಲಿನ ಯೆನೆಪೊಯ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಯೆನೆಪೊಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಮೂಲಕ ಉನ್ನತ ಸಾಧನೆಗೈದ ಶಿಕ್ಷಕರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರೌಢಶಾಲಾ ವಿಭಾಗದಲ್ಲಿ ಎಲಿಮಲೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ ಪೇರಾಲು ಹಾಗೂ ಪ್ರಾಥಮಿಕ ವಿಭಾಗದಲ್ಲಿ ಬೈಲು ಪ್ರಾಥಮಿಕ ಶಾಲಾ ಶಿಕ್ಷಕ ಎಡ್ವರ್ಡ್ ಡಿಸೋಜರಿಗೆ ನಗದು ಸಹಿತ ಪ್ರಶಸ್ತಿಯನ್ನು ಯೆನೆಪೊಯ (ಪರಿಗಣಿತ) ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ವ ಾತನಾಡಿದ ಚಂದ್ರಶೇಖರ ಪೇರಾಲು, ನಾನು ಬಾಲ್ಯದಲ್ಲಿ 10 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸುಳ್ಯದ ಕುಗ್ರಾಮ ವೊಂದರಲ್ಲಿರುವ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಗ್ರಾಮೀಣ ಶಾಲೆಗಳ ಮಕ್ಕಳ ಬಡತನ ಕಂಡು ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸತೊಡಗಿದ್ದೇನೆ. ಶಾಲೆಯಲ್ಲಿ, ಸರಕಾರಿ ಕಚೇಯಲ್ಲಿ ಉತ್ತಮ ವಾತಾವರಣವನ್ನು, ಆಕರ್ಷಕ ಗೊಳಿಸುವ ಕೆಲಸವನ್ನು ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಪ್ರೇರಕರು, ಮಾರ್ಗದರ್ಶಿಗಳು ಆಗಿರಬೇಕು ಎಂದರು.

* ಎಡ್ವರ್ಡ್ ಡಿಸೋಜ ಮಾತನಾಡಿ, ಬೆಳ್ತಂಗಡಿಯ ಶಾಲೆಯಲ್ಲಿ ಕಾಣಿಕೆ ಡಬ್ಬಿ ಇಟ್ಟು ಸಂಗ್ರಹವಾದ ಹಣದಿಂದ ಶಾಲೆಯ ಅಭಿವೃದ್ಧಿ ಮಾಡಿದ ತೃಪ್ತಿ ಇದೆ ಎಂದರು
ವೈಎಂಕೆ ಸ್ಮಾರಕ ಉಪನ್ಯಾಸ ನೀಡಿದ ಮಂಗಳೂರು ಮೀನುಗಾರಿಕಾ ಕಾಲೇಜಿನ ಮಾಜಿ ಡೀನ್ ಎಸ್.ಎಂ.ಶಿವಪ್ರಕಾಶ್, ವಿದ್ಯಾರ್ಥಿಗಳು ನಿರಂತರ ಕ್ರಿಯಾಶೀಲತೆಯೊಂದಿಗೆ ನಿರಂತರ ಕಲಿಕೆಯೊಂದು ಸ್ವಯಂಸ್ಫೂರ್ತಿ ಪಡೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಯೆನೆಪೊಯ ವಿವಿ ಸಹ ಕುಲಪತಿ ಫರ್ಹಾದ್ ಯೆನೆಪೊಯ, ಯೆನೆಪೊಯ ಪಪೂ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮಚಿರಾತ್, ಶಾಲಾ ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೆದ್, ಶಾಲಾ ಉಪ ಪ್ರಾಂಶುಪಾಲ ರೇಶ್ಮಾ ನಾಯಕ್, ಯೆನೆಪೊಯ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯೆ ನಸ್ರೀನಾ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ಅನಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News