​ಬಾರಕೂರು ತಾಪಂ ಕ್ಷೇತ್ರ ಬಿಜೆಪಿಗೆ

Update: 2019-11-14 15:47 GMT

ಉಡುಪಿ, ನ.14: ಉಡುಪಿ ತಾಲೂಕು ಪಂಚಾಯತ್‌ನ ಬಾರಕೂರು ತಾಪಂ ಕ್ಷೇತ್ರಕ್ಕೆ ನ.12ರಂದು ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಚಂದ್ರಶೇಖರ ಶೆಟ್ಟಿ 2,349 ಮತ ಪಡೆದು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯನ್ನು 1677 ಮತಗಳ ಅಂತರದಿಂದ ಮಣಿಸಿದ್ದಾರೆ.

ಚಲಾವಣೆಯಾದ ಒಟ್ಟು 3149 ಮತಗಳ ಪೈಕಿ ಕಾಂಗ್ರೆಸ್‌ನ ಜಾನ್ ಪಿಕಾರ್ಡೋ 672 ಹಾಗೂ ಜೆಡಿಎಸ್‌ನ ಶೋಭಾ ಫೆರ್ನಾಂಡಿಸ್ 128 ಮತ ಪಡೆದಿದ್ದು, 47 ನೋಟಾ ಮತ ಚಲಾವಣೆಯಾಗಿದೆ.

ಗ್ರಾಪಂ ಉಪಚುನಾವಣೆ: ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಪಂನ ಬಿಲ್ಲಾಡಿ-1 ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಅರುಣ್‌ಕುಮಾರ್ ಶೆಟ್ಟಿ 417 ಮತ ಪಡೆದು ವಿಜೇತರಾಗಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಪ್ರಭಾಕರ ಶೆಟ್ಟಿ 310 ಮತಗಳಿಸಿದ್ದಾರೆ. 10 ಮತಗಳು ತಿರಸ್ಕೃತವಾಗಿವೆ. ಕ್ಷೇತ್ರದಲ್ಲಿ ಒಟ್ಟು 727 ಮತಗಳು ಚಲಾವಣೆಗೊಂಡಿದ್ದವು.

ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಪಂನ ಮುಲ್ಕಡ್ಕ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸೂರಜ್ ಸಾಲಿಯಾನ್ 337 ಮತ ಪಡೆದು 37 ಮತಗಳ ಅಂತರದಿಂದ ಜಯಿಸಿದ್ದಾರೆ. ಸಮೀಪ ಸ್ಪರ್ಧಿ ಸಂತೋಷ್ 300 ಮತ ಪಡೆದಿದ್ದಾರೆ. 17 ಮತ ತಿರಸ್ಕೃತವಾಗಿವೆ.

ಅವಿರೋಧ ಆಯ್ಕೆ: ಕಾರ್ಕಳ ತಾಲೂಕಿನ ಕಲ್ಯಾ ಗ್ರಾಪಂನ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇಲ್ಲಿ ದಿವಾಕರ ಕರ್ಕೆರ, ಹೇಮ, ಸರಸ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಕಟಪಾಡಿ ಗ್ರಾಪಂ ವ್ಯಾಪ್ತಿಯ ಏಣಗುಡ್ಡೆ ವಾರ್ಡ್‌ನ ಒಂದು ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News