10 ವರ್ಷ ಬಿಜೆಪಿ ತೆಕ್ಕೆಯಲ್ಲಿದ್ದ ಬೆಂಗರೆ ವಾರ್ಡ್ ಕಸಿದ ಎಸ್‌ಡಿಪಿಐ

Update: 2019-11-14 16:13 GMT

ಮಂಗಳೂರು, ನ.14: ಬೆಂಗರೆಯಲ್ಲಿ ಬದಲಾವಣೆ ಗಾಳಿ ಬೀಸಿದೆ. ಕಳೆದ 10 ವರ್ಷಗಳಿಂದ ಬಿಜೆಪಿಯ ತೆಕ್ಕೆಯಲ್ಲಿದ್ದ ಬೆಂಗರೆ 60ನೆ ವಾರ್ಡ್‌ನಲ್ಲಿ ಈ ಬಾರಿ ಎಸ್‌ಡಿಪಿಐ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದೆ.

ಇಲ್ಲಿ ಎಸ್‌ಡಿಪಿಯಿಂದ ಮುನೀಬ್ ಬೆಂಗ್ರೆ 1,701 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಿಜೆಪಿಯ ಗಂಗಾಧರ ಸಾಲ್ಯಾನ್ 1498 ಮತ ಗಳಿಸಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ ನಿರೀಕ್ಷಿಸಿದ್ದ ಇಲ್ಲಿ, ಎಸ್‌ಡಿಪಿಐ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

ಎಸ್‌ಡಿಪಿಐ ಕಾರ್ಯಕರ್ತರು ಈ ಗೆಲುವಿನ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News