ಬಂಟ್ವಾಳ: ನ. 16ರಿಂದ ರೋಟರಿ ಫೌಂಡೇಶನ್ ಸೆಮಿನಾರ್

Update: 2019-11-14 16:29 GMT

ಬಂಟ್ವಾಳ, ನ. 14: ಬಂಟ್ವಾಳ ರೋಟರಿ ಕ್ಲಬ್ ಆಶ್ರಯದಲ್ಲಿ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ ರೋಟರಿ ಫೌಂಡೇಶನ್ ಸೆಮಿನಾರ್ ಮಂಗಳೂರಿನ ಅಡ್ಯಾರ್ ಗಾರ್ಡನ್‍ನಲ್ಲಿ ನ. 16 ಮತ್ತು 17ರಂದು ನಡೆಯಲಿದೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಆರ್. ಬಾಳಿಗಾ ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಫೌಂಡೇಶನ್ ಟ್ರಸ್ಟಿ ಗುಲಾಮ್ ವಹನವತಿ ಕಾರ್ಯಕ್ರಮವನ್ನು ನ. 16ರಂದು ಸಂಜೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೋ ವಹಿಸುವರು. ಗೌರವ ಅತಿಥಿಗಳಾಗಿ ಪಿಡಿಜಿ ಸೂರ್ಯಪ್ರಕಾಶ್ ಭಟ್, ಪಿಡಿಜಿಕೆ ಕೃಷ್ಣ ಶೆಟ್ಟಿ, ಡಿಜಿಇ ಎಂ.ರಂಗನಾಥ ಭಟ್, ಡಿಜಿಎನ್ ರವಿಂದ್ರ ಭಟ್ ಎ.ಆರ್. ಪಾಲ್ಗೊಳ್ಳಲಿದ್ದಾರೆ. ಸಂಜೆ 5ರಿಂದ ನೋಂದಣಿ ಕಾರ್ಯಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.

ನ. 17ರಂದು ನಡೆಯುವ ಸೆಮಿನಾರ್ ಅಧ್ಯಕ್ಷತೆಯನ್ನು ರೋಟರಿ ಗವರ್ನರ್ ಜೋಸೆಫ್ ಮ್ಯಾಥ್ಯೂ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ನಿರ್ದೇಶಕ ಪಿಡಿಜಿ ಕಮಲ್ ಸಾಂಘ್ವಿ, ಅತಿಥಿಗಳಾಗಿ ಪಿಡಿಜಿ ಅವಿನಾಶ್ , ಡಿಜಿಎಸ್‍ಸಿ ಎಸ್.ಕೆ.ಸಂಜಯ್ ಮತ್ತು ಡಿಎಸ್‍ಸಿ ಪಿ.ಕೆ.ರಾಮಕೃಷ್ಣ ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.

ರೋಟರಿಯ ಜಿಲ್ಲಾ ಟಿಆರ್‍ಎಫ್ ಉಪಸಮಿತಿಯ ಚೇರ್ಮನ್ ಡಾ. ರಮೇಶಾನಂದ ಸೋಮಯಾಜಿ, ವಲಯ 4ರ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ, ಜಿಲ್ಲಾ ಕಾರ್ಯದರ್ಶಿ ವಿವೇಕ್ ಅತ್ತಾವರ, ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ, ಸೆಮಿನಾರ್ ಚೇರ್ಮನ್ ಮಹಮ್ಮದ್ ಇಕ್ಬಾಲ್, ಸೆಮಿನಾರ್ ಕಾರ್ಯದರ್ಶಿ ಅಹಮದ್ ಮುಸ್ತಾಫಾ, ಕ್ಲಬ್ ಕಾರ್ಯದರ್ಶಿ ಸ್ಮಿತಾ ಸಲ್ದಾನ ಉಪಸ್ಥಿತರಿರುವರು.

ರೋಟರಿ ದತ್ತಿನಿಧಿ ಸಂಸ್ಥೆ ಶುದ್ಧ ಕುಡಿಯುವ ನೀರು ಒದಗಿಸುವುದು, ರೋಗಗಳನ್ನು ತಡೆಗಟ್ಟುವುದು, ಅನಕ್ಷರತೆ ಹೋಗಲಾಡಿಸುವುದು, ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬಡತನ ನಿರ್ಮೂಲನೆಗೆ ನೆರವಾಗುವುದು, ತಾಯಿ ಮಕ್ಕಳ ರಕ್ಷಣೆ, ವಿಶ್ವಶಾಂತಿಯ ಗುರಿಯನ್ನು ಹೊಂದಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ, ಸೆಮಿನಾರ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಸೆಮಿನಾರ್ ಕಾರ್ಯದರ್ಶಿ ಅಹಮದ್ ಮುಸ್ತಾಫಾ, ರಿಜಿಸ್ಟ್ರೇಶನ್ ಕಮಿಟಿ ಚೇರ್ಮನ್ ಕೆ.ನಾರಾಯಣ ಹೆಗ್ಡೆ, ಕ್ಲಬ್ ಕಾರ್ಯದರ್ಶಿ ಸ್ಮಿತಾ ಸಾಲ್ದಾನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News