ಮನಪಾ ಚುನಾವಣೆ : 60 ವಾರ್ಡ್‌ಗಳಲ್ಲಿ 1,692 ನೋಟಾ ಹಕ್ಕು ಚಲಾವಣೆ

Update: 2019-11-14 16:56 GMT

ಮಂಗಳೂರು : ಪಾಲಿಕೆಯ 60 ವಾರ್ಡ್‌ಗಳಲ್ಲೂ ಕೂಡಾ ಮತದಾರರು ನೋಟಾ ಹಕ್ಕುಗಳನ್ನು ಚಲಾವಣೆ ಮಾಡಿದ್ದಾರೆ. ಒಟ್ಟು 3,94,894 ಮತದಾರರ ಪೈಕಿ 2,35,235 ಮಂದಿ ಮತ ಚಲಾಯಿಸಿದ್ದರು. ಅ ಪೈಕಿ 1,692 ಮಂದಿ ನೋಟಾ ಹಕ್ಕುಗಳನ್ನು ಚಲಾಯಿಸಿದ್ದರು.

ಕದ್ರಿ (ದಕ್ಷಿಣ) ವಾರ್ಡ್ 33ರಲ್ಲಿ ಅತೀ ಕಡಿಮೆ 8 ಮತ್ತು ವಾರ್ಡ್ 50ರ ಅಳಪೆ (ದಕ್ಷಿಣ)ದಲ್ಲಿ ಅತೀ ಹೆಚ್ಚು 55 ನೋಟಾ ಮತ ಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News