ಕರ್ನಾಟಕ ಬ್ಯಾಂಕ್ ಚಾಲ್ತಿ ಖಾತೆ, ಉಳಿತಾಯ ಖಾತೆ ಅಭಿಯಾನ

Update: 2019-11-15 18:50 GMT

ಮಂಗಳೂರು, ನ. 15: ಕರ್ನಾಟಕ ಬ್ಯಾಂಕ್ ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆ ಅಭಿಯಾನವನ್ನು ಶುಕ್ರವಾರ ಆರಂಭಿಸಿತು.

2019 ನವೆಂಬರ್ 15ರಿಂದ 2020 ಫೆಬ್ರವರಿ 29ರ ವರೆಗೆ ರಾಷ್ಟ್ರವ್ಯಾಪಿ ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಕ್ರೋಢೀಕರಣ ನಡೆಯಲಿದೆ. ದೇಶಾದ್ಯಂತ ಇರುವ ತನ್ನ ಎಲ್ಲ 846 ಶಾಖೆಗಳ 8000ಕ್ಕೂ ಅಧಿಕ ನೌಕರರು ಸಕ್ರಿಯವಾಗಿ ಭಾಗಿಯಾಗುವ ಮೂಲಕ 4,18 ಲಕ್ಷ ಚಾಲ್ತಿ ಹಾಗೂ ಉಳಿತಾಯ ಖಾತೆಯನ್ನು ಕ್ರೋಢೀಕರಣಗೊಳಿಸಲಿದ್ದಾರೆ ಎಂದು ಬ್ಯಾಂಕ್‌ನ ಹೇಳಿಕೆ ತಿಳಿಸಿದೆ.

ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕೆಬಿಎಲ್ ಬಿಎಚ್‌ಐಎಂ ಯುಪಿಐ ಆ್ಯಪ್, ಕೆಬಿಎಲ್ ಆಪ್ನಾ ಆ್ಯಪಂ, ಎಸ್‌ಎಸ್‌ಎಸ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾಡ್ ಮೊದಲಾದ ವಿವಿಧ ಗ್ರಾಹಕ ಸ್ನೇಹಿ ಡಿಜಿಟಲ್ ಚಾಲನೆಗಳನ್ನು ಆರಂಭಿಸಲಿದೆ. ಈ ಸ್ವಸೇವಾ ಚಾನೆಲ್‌ಗಲು ತಮ್ಮ ಅನುಕೂಲತೆಗೆ ಅನುಗುಣವಾಗಿ ಗ್ರಾಹಕರನ್ನು ಸಶಕ್ತಗೊಳಿಸಲಿದೆ. ತನ್ನ ಉಳಿತಾಯ ಖಾತೆಯ ಗ್ರಾಹಕರಿಗೆ 10 ಲಕ್ಷ ರೂಪಾಯಿಯ ‘ಕೆಬಿಎಲ್ ಸುರಕ್ಷಾ’ ವೈಯುಕ್ತಿಕ ಅಪಘಾತ ವಿಮೆ ನೀಡಲಿದೆ. ಇದಕ್ಕೆ ಗ್ರಾಹಕರು ತಿಂಗಳಿಗೆ 125 ಹಾಗೂ ಜಿಎಸ್‌ಟಿ ಮಾತ್ರ ಪಾವತಿ ಮಾಡಿದರೆ ಸಾಕು.

ಬ್ಯಾಂಕ್‌ನ ಅನುಕೂಲಕರ ಉಳಿತಾಯ ಯೋಜನೆಗಳು ಕೆಬಿಎಲ್ ಎಸ್‌ಬಿ-ಟಿಎಎಸ್‌ಸಿಯನ್ನು ಕೂಡ ಒಳಗೊಂಡಿದೆ. ಈ ಉಳಿತಾಯ ಖಾತೆ ಯೋಜನೆ ಟ್ರಸ್ಟ್‌ಗಳು, ಅಸೋಶಿಯೇಶನ್, ಸೊಸೈಟಿ, ಕ್ಲಬ್‌ಗಾಗಿ ವಿಶೇಷ ಸೌಲಭ್ಯಗಳನ್ನು ಹೊಂದಿರಲಿದೆ. ಕೆಬಿಎಲ್ ಎಸ್‌ಬಿ ಸ್ಯಾಲರಿ ಮೂರು ಯೋಜನೆಗಳನ್ನು ಹೊಂದಿರಲಿದೆ, ಅದು ಎಸ್‌ಬಿ ಸ್ಯಾಲರಿ ಎಕ್ಸ್‌ಕ್ಯೂಟಿವ್, ಎಸ್‌ಬಿ ಸ್ಯಾಲರಿ ಪ್ರೈಮ್ ಹಾಗೂ ಎಸ್‌ಬಿ ಸ್ಯಾಲರಿ ಕ್ಲಾಸಿಕ್. ಇದು ಡಿಜಿಟಲ್ ಸಾಮರ್ಥ್ಯ ಹೊಂದಿರಲಿದೆ ಹಾಗೂ ಇದಕ್ಕೆ ಯಾವುದೇ ಕನಿಷ್ಠ ಬ್ಯಾಲೆನ್ಸ್ ಮಾನದಂಡ ಅಗತ್ಯವಿಲ್ಲ.

ಮಾನವನ ಮಧ್ಯಪ್ರವೇಶವಿಲ್ಲದೆ ಕಾರ್ಯಾಚರಣೆ ಸಾಧ್ಯವಾಗುವ ರೊಬೊಟಿಕ್ ಪ್ರೊಸೆಸ್ ಅಟೋಮೇಶನ್ ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಹೊಂದಿರುವ ಡಿಜಿ ಶಾಖೆಯನ್ನು ಬ್ಯಾಂಕ್ ಬೆಂಗಳೂರಿನಲ್ಲಿ ಆರಂಭಿಸಿದೆ. ಈ ಶಾಖೆ ಗ್ರಾಹಕರಿ (24x7 ) ತುರ್ತು ಸೇವೆಯನ್ನು ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News