ಮಂಗಳೂರು : ಎ.ಜೆ. ಆಸ್ಪತ್ರೆಯಲ್ಲಿ ಮಧುಮೇಹ ಕ್ಷೇಮ ಕೇಂದ್ರ ಆರಂಭ

Update: 2019-11-16 11:14 GMT

ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಮಧುಮೇಹಿಗಳಿಗೆ ಸಂಬಧಿಸಿದಂತೆ ಸರ್ವ ಸೌಲಭ್ಯಗಳು ಇರುವ ಮಧುಮೇಹ ಕ್ಷೇಮ ಕೇಂದ್ರವನ್ನು ಆರಂಭಿಸುತ್ತಿದೆ.

ಮಧುಮೇಹವು ಹೃದಯಾಘಾತ, ಪಾರ್ಶ್ವವಾಯು ಮತ್ತು ವಿವಿಧ ಸೋಂಕುಗಳಂತಹ ಮಾರಣಾಂತಿಕ ತೊಂದರೆಗಳನ್ನು ಉಂಟು ಮಾಡುತ್ತದೆ.  ಮೂತ್ರಪಿಂಡ ವೈಫಲ್ಯ, ನರಗಳ ತೊಂದರೆ, ದೃಷ್ಟಿಹೀನತೆ / ನಷ್ಟ ಮತ್ತು ಪಾದದ ಗ್ಯಾಂಗ್ರೀನ್ ಮುಂತಾದ ಇತರ ತೊಂದರೆಗಳು ಪ್ರಮುಖ ಸಮಸ್ಯೆಗಳು ಉಂಟಾಗುತ್ತವೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ತೊಂದರೆಗಳನ್ನು ತಡೆಗಟ್ಟಬಹುದಾದರೂ, ಜನರು ಮಧುಮೇಹ ಸ್ಥಿತಿಯನ್ನು ನಿರ್ಲಕ್ಷಿಸುತ್ತಾರೆ ಮತ್ತು ಅಗತ್ಯವಿರುವ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.  ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಧುಮೇಹ ಜನರ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ, ಎ ಜೆ ಆಸ್ಪತ್ರೆ ಮಧುಮೇಹಕ್ಕೆ  ಸಮಗ್ರ ಚಿಕಿತ್ಸೆ ನೀಡಲು ಒತ್ತು ನೀಡಿ “ಡಯಾಬಿಟಿಸ್ ವೆಲ್ನೆಸ್ ಕ್ಲಿನಿಕ್” ಅನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು.

ಡಯಾಬಿಟಿಸ್ ವೆಲ್ನೆಸ್ ಕ್ಲಿನಿಕ್ ಮಧುಮೇಹದ ಸಮಗ್ರ ನಿರ್ವಹಣೆಗೆ ಒಂದು ಸ್ಥಳವಾಗಿದೆ, ಇದು ರೋಗಿಗಳ ಆರೋಗ್ಯದ  ಗುಣಮಟ್ಟವನ್ನು ಸುಧಾರಿಸಲು ಎಂಡೋಕ್ರಿ ನೊಲೊಜಿಸ್ಟ್, ಮಧುಮೇಹ ಶಿಕ್ಷಣ ತಜ್ಞರು, ಆಹಾರ ಪದ್ಧತಿ  ತಜ್ಞರು, ಭೌತ ಚಿಕಿತ್ಸಕರು, ಯೋಗ ಚಿಕಿತ್ಸಕರು ಹಾಗೂ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದಿಂದ ಬೆಂಬಲಿತವಾಗಿರುವ ತಜ್ಞರ ತಂಡ ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಈ ಸಂದರ್ಭ  ಡಾ. ಆಮಿತ ಮಾರ್ಲ, ನಿರ್ದೆಶಕರು ಎ.ಜೆ. ಆಸ್ಪತ್ರೆ, ಸಲಹೆಗಾರ ಅಂತಃಸ್ರಾವಶಾಸ್ತ್ರಜ್ಞ (ಕನ್ಸಲ್ಟೆಂಟ್ ಎನ್ಡೋಕ್ರಿನೋಲಾಜಿಸ್ಟ್), ಡಾ. ಗಣೇಶ್ ಹೆಗ್ಡೆ, ಡಾ. ಕಿಶನ್ ದೆಲಂಪಾಡಿ, ಸಲಹೆಗಾರ ವ್ಯೆದ್ಯೆ ಡಾ. ಶಿಲ್ಪಾ ಮುಲ್ಕಿ, ಮಾರ್ಕೆಟಿಂಗ್ ಕನ್ಸಲ್ಟೆಂಟ್ ಶಿವಪ್ರಸಾದ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಶ್ ರೈ, ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಯಾಬಿಟಿಸ್ ವೆಲ್ನೆಸ್ ಕ್ಲಿನಿಕ್ ಉದ್ಘಾಟನೆ ಪ್ರಯುಕ್ತ ನ. 18ರಿಂದ 30ರ ವರೆಗೆ ಮಧುಮೇಹ ಆರೈಕೆ ಪ್ಯಾಕೆಜುಗಳು 25% ರಿಯಾಯಿತಿ  ದರದಲ್ಲಿ ಲಭ್ಯವಿರುವುದಾಗಿ ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 8904001123  ಮೊ. ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರು ಮತ್ತು ಕಿಡ್ನಿಕಸಿ ತಜ್ಞರಾದ ಡಾ. ಪ್ರಶಾಂತ ಮಾರ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News