ಫರಂಗಿಪೇಟೆ: ಡಾ.ಇಸ್ಮಾಯಿಲ್ ಹನೀಫಿಗೆ ಸನ್ಮಾನ

Update: 2019-11-16 13:35 GMT

ಬಂಟ್ವಾಳ : ಫರಂಗಿಪೇಟೆ ಜಮಾಅತ್ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸದ ಹಳೆ ವಿದ್ಯಾರ್ಥಿ ವತಿಯಿಂದ ಇನ್ಸ್ಟಿಟ್ಯೂಟ್ ಓಫ್ ಇಸ್ಲಾಮಿಕ್ ಮೆಡಿಕಲ್ ಸೈನ್ಸ್‌ನಿಂದ ಆಲಿಂ ತ್ವಬೀಬ್ ಬಿರುದು ಪಡೆದ ಡಾ. ಇಸ್ಮಾಯಿಲ್ ಹನೀಫಿ ಸಜಿಪ ಅವರನ್ನು ಸನ್ಮಾನಿಸಲಾಯಿತು.

ಕೇಂದ್ರ ಜುಮಾ ಮಸೀದಿ ಫರಂಗಿಪೇಟೆ ಇದರ ಉಪಾಧ್ಯಕ್ಷ ಉಮಾರ್ ಫಾರೂಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ದಾರಿಮಿ, ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವಕ,   ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಕೋಶಾಧಿಕಾರಿ ಮಜೀದ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿ ಅಬೂಬಕರ್ ಫರಂಗಿಪೇಟೆ, ಸದಸ್ಯರಾದ ಬಶೀರ್, ಹಸನಬ್ಬ, ಇಬ್ರಾಹಿಂ ಕುಂಪನಮಜಲ್, ಮಸೀದಿ ಅಧ್ಯಾಪಕಾರ ಕೌಸರೀ ಉಸ್ತಾದ್, ಶಾಫಿ ಉಸ್ತಾದ್, ಅಬ್ಬಾಸ್ ಉಸ್ತಾದ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News