ಸಾಂಸ್ಕೃತಿಕ ಸ್ಪರ್ಧೆ: ಬ್ರಹ್ಮಾವರ ನಿರ್ಮಲಾ ಶಾಲೆಗೆ ಪ್ರಶಸ್ತಿ

Update: 2019-11-16 15:28 GMT

ಬ್ರಹ್ಮಾವರ, ನ.16: ಬ್ರಹ್ಮಾವರ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸ ಲಾದ ಸಾಂಸ್ಕೃತಿಕ ಕಲಾ ವೈಭವ ಸ್ಪರ್ಧೆಯಲ್ಲಿ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆ 5000ರೂ. ನಗದು ಮತ್ತು ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಗೆದ್ದು ಕೊಂಡಿತು.

ದ್ವಿತೀಯ ಸ್ಥಾನ ಪಡೆದ ಬ್ರಹ್ಮಾವರ ಸರಕಾರಿ ಶಾಲೆಗೆ 3000ರೂ. ನಗದು ಬಹುಮಾನ ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆದ ಚೇರ್ಕಾಡಿ ಶಾರದಾ ಹೈಸ್ಕೂಲ್‌ಗೆ 2000ರೂ. ನಗದು ಬಹುಮಾನ ಹಾಗೂ ಟ್ರೋಪಿ ಯನ್ನು ನೀಡಲಾಯಿತು. ಈ ಸ್ಪರ್ಧೆಯಲ್ಲಿ ಸುಮಾರು 9 ಶಾಲೆಗಳ ವಿದ್ಯಾರ್ಥಿ ಗಳು ಭಾಗವಹಿಸಿದ್ದವು.

ಸ್ಪರ್ಧೆಯನ್ನು ರೋಟರಿ ಜಿಲ್ಲಾ ಗವರ್ನರ್ ರಾಜರಾಮ್ ಭಟ್ ಉದ್ಘಾಟಿಸಿ ದರು. ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋ ಪಾಧ್ಯಾಯರು ರೆ.ಫಾ.ಜೋಸ್ಲಿ ಡಿಸಿಲ್ವ, ರೋಟರಿ ಅಧ್ಯಕ್ಷ ಎಸ್.ಕೆ.ಪ್ರಾಣೇಶ್, ಕಾರ್ಯದರ್ಶಿ ಸತೀಶ್ ಶೆಟ್ಟಿ, ಶಾಲಾ ಇಂಟರ್ಯಾಕ್ಟ್ ಸಂಘಟಕಿ ಐರಿನ್ ಪಿರೇರಾ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ವೆಂಕಟೇಶ್ ಭಟ್ ಚೇಂಪಿ, ವಿದೂಷಿ ಅದಿತಿ ಜಿ. ಮೂರ್ತಿ ಸಹಕರಿಸಿದರು. ಬಹುಮಾನವನ್ನು ರೋಟರಿ ವಲಯ ಲೆಫ್ಟಿನೆಂಟ್ ದೇವದಾಸ್ ಶೆಟ್ಟಿಗಾರ್, ಯುವ ಸೇವಾ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಪ್ರಾಣೇಶ್ ಹಾಗೂ ಫಾ.ಜೋಸ್ಲಿ ಡಿಸಿಲ್ವ ವಿತರಿಸಿದರು. ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಭುಜಂಗ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News