ನ.18ರಿಂದ ವಿಶ್ವ ಪಾರಂಪರೆ ಸಪ್ತಾಹ

Update: 2019-11-16 15:37 GMT

ಮಂಗಳೂರು, ನ.16: ಇದೇ ನವೆಂಬರ್ 18ರಿಂದ 25ರವರೆಗೆ ನಡೆಯುವ ವಿಶ್ವ ಪಾರಂಪರೆ ಸಪ್ತಾಹದ ಪ್ರಯುಕ್ತ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನ.18ರಂದು ಬೆಳಗ್ಗೆ 9 ಗಂಟೆಗೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀಮಂತಿಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ ಬಿಜೈವರೆಗೆ ಪಾರಂಪರೆ ನಡೆ, ನ.18ರಿಂದ 25ರವರೆಗೆ ಬೆಳಗ್ಗೆ 10ರಿಂದ 5:30ರವರೆಗೆ ಮೈಸೂರು ರಾಜಮನೆತನದ ಮತ್ತು ಪಾರಂಪರಿಕ ಕಟ್ಟಡಗಳ ವಿಶೇಷ ಛಾಯಾಚಿತ್ರ ಉದ್ಘಾಟನೆ ಮತ್ತು ಪ್ರದರ್ಶನ ನಡೆಯಲಿದೆ.

ನ.23ರಂದು ಬೆಳಗ್ಗೆ 10:30ಕ್ಕೆ ವಿಶೇಷ ನಾಣ್ಯಗಳ ಉದ್ಘಾಟನೆ ಮತ್ತು ಪ್ರದರ್ಶನ ನಡೆಯಲಿದೆ ಎಂದು ಶ್ರೀಮಂತಿಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News